ADVERTISEMENT

ದೇವಾಲಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 13:24 IST
Last Updated 10 ಏಪ್ರಿಲ್ 2021, 13:24 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುದಗಲ್ ರಾಘವೇಂದ್ರ ಮಠದಲ್ಲಿ ರಾಯರ ದರ್ಶನ ಪಡೆದರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುದಗಲ್ ರಾಘವೇಂದ್ರ ಮಠದಲ್ಲಿ ರಾಯರ ದರ್ಶನ ಪಡೆದರು   

ಮುದಗಲ್: ಮಸ್ಕಿ ಉಪ ಚುನಾವಣೆಯ ಪ್ರಚಾರ ಸಭೆಗೆ ತೆರಳುವ ಮುಂಚೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ರಾಘವೇಂದ್ರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

ಪಟ್ಟಣದ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಿಗ್ಗೆ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಮಿತಿ ಸದಸ್ಯರು ಗೌರವಿಸಿದರು. ರಾಘವೇಂದ್ರ ಮಠದಲ್ಲಿ ಶ್ರೀಮಠದ ಅರ್ಚಕರು ಮುಖ್ಯಮಂತ್ರಿ ಅವರಿಗೆ ಆಶೀರ್ವಾದಿಸಿ, ಮಂತ್ರಾಕ್ಷತೆ ನೀಡಿದರು.

ಸಚಿವ ಭೈರತಿ ಬಸವರಾಜ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ, ಶಾಸಕರಾದ ದೊಡ್ಡನಗೌಡ ಪಾಟೀಲ, ರಾಜುಗೌಡ, ವಿಪ್ರ ಸಮಾಜದ ಅರ್ಚಕರಾದ ಮದ್ವಾಚಾರ್ಯ, ವಿ.ಎಸ್. ಶೆಡ್ಲಿಗೇರಿ, ಗುರುರಾಜ ದೇಶಪಾಂಡೆ, ಆರ್.ವಿ. ಗುಮಾಸ್ತೆ, ಕೆ.ವೆಂಕಟೇಶ, ಹನುಮೇಶ ಪಟವಾರಿ, ಗುರುರಾಜ ದೇಶಪಾಂಡೆ, ಗುರುಬಸಪ್ಪ ಸಜ್ಜನ, ವಿಶ್ವನಾಥ ದೇಸಾಯಿ, ಶಿವಾನಂದ ಸುಂಕದ, ಚಂದ್ರಶೇಖರ ಗಂಗಾವತಿ, ಅನಿಲ ಕುಮಾರ ಬುಶೆಟ್ಟಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.