ADVERTISEMENT

ದೀಪಾವಳಿ ಮಾಲಿನ್ಯ ಉಂಟು ಮಾಡದಿರಲಿ

ಮಸ್ಕಿ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 14:22 IST
Last Updated 10 ನವೆಂಬರ್ 2023, 14:22 IST
‘ಸ್ವಚ್ಛ ದೀಪಾವಳಿ– ಶುಭ ದೀಪಾವಳಿ’ ಅಭಿಯಾನಕ್ಕೆ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಶುಕ್ರವಾರ ಸಹಿ ಮಾಡುವ ಮೂಲಕ ಚಾಲನೆ ನೀಡಿದರು
‘ಸ್ವಚ್ಛ ದೀಪಾವಳಿ– ಶುಭ ದೀಪಾವಳಿ’ ಅಭಿಯಾನಕ್ಕೆ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಶುಕ್ರವಾರ ಸಹಿ ಮಾಡುವ ಮೂಲಕ ಚಾಲನೆ ನೀಡಿದರು   

ಮಸ್ಕಿ: ‘ದೀಪಾವಳಿ ಬೆಳಕು ಮತ್ತು ಜ್ಞಾನದ ಹಬ್ಬವಾಗಬೇಕೇ ಹೊರೆತು ಪರಿಸರ ಮಾಲಿನ್ಯ ಉಂಟುಮಾಡುವ ಹಬ್ಬವಾಗಬಾರದು’ ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಅಭಿಪ್ರಾಯಪಟ್ಟರು.

ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ‘ಸ್ವಚ್ಛ ದೀಪಾವಳಿ– ಶುಭ ದೀಪಾವಳಿ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೀಪಾವಳಿಯನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸಬೇಕು. ಶಬ್ದ, ಬೆಳಕು, ವಾಯು, ಜಲ ಮಾಲಿನ್ಯವಾಗದ ಪಟಾಕಿಗಳನ್ನೇ ಬಳಸಿ’ ಎಂದು ಕರೆ ನೀಡಿದರು.

ADVERTISEMENT

‘ಹಾನಿಕಾರಕ ಪಟಾಕಿಗಳ ಬಳಕೆ ಸಲ್ಲದು. ಸರ್ಕಾರ ಸೂಚಿಸಿದ ಹಸಿರು ಪಟಾಕಿಗಳನ್ನೇ ಬಳಸಬೇಕು. ಪಟಾಕಿ ಬಳಸುವಾಗ ಯಾವುದೇ ಜೀವಿಯ ದೇಹಕ್ಕೆ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗದಂತೆ ಕಟ್ಟೆಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

ಪುರಸಭೆ ಆವರಣದಲ್ಲಿ ಸೆಲ್ಫಿ ಬೋರ್ಡ್ ಅಳವಡಿಸಲಾಗಿತ್ತು. ಸಹಿ ಅಭಿಯಾನವನ್ನೂ ನಡೆಸಲಾಯಿತು. ಸಿಬ್ಬಂದಿ ಸೆಲ್ಫಿ ಬೋರ್ಡ್‌ನಲ್ಲಿ ಚಿತ್ರ ತೆಗೆಸಿಕೊಂಡು ಪರಿಸರಸ್ನೇಹಿ ದೀಪಾವಳಿ ಆಚರಣೆ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಪುರಸಭೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.