ADVERTISEMENT

ಕವಿತಾಳ: ಎಂಬಿಬಿಎಸ್ ವೈದ್ಯರ ನೇಮಕಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:19 IST
Last Updated 4 ಜನವರಿ 2026, 6:19 IST
ಕವಿತಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ದಲಿತ ಸಂರಕ್ಷ ಸಮಿತಿ ಮುಖಂಡರು ಡಾ.ಶರಣಬಸವರಾಜಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಿದರು
ಕವಿತಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ದಲಿತ ಸಂರಕ್ಷ ಸಮಿತಿ ಮುಖಂಡರು ಡಾ.ಶರಣಬಸವರಾಜಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಿದರು   

ಕವಿತಾಳ: ತುರ್ತು ವಾಹನ ಕೊರತೆ ಸೇರಿದಂತೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ದಲಿತ ಸಂರಕ್ಷ ಸಮಿತಿ ಮುಖಂಡರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವರಾಜಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘ತುರ್ತು ವಾಹನ ಲಭ್ಯವಾಗದ ಕಾರಣ ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಎಂಬಿಬಿಎಸ್‌, ತಜ್ಞ ವೈದ್ಯರು ಮತ್ತು ಸ್ಟಾಫ್‌ ನರ್ಸ್‌ಗಳ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.

ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಸಂಘಟನೆ ಅಧ್ಯಕ್ಷ ಹುಚ್ಚಪ್ಪ ಬುಳ್ಳಾಪುರ, ಫಕೀರಪ್ಪ ನವಲಕಲ್‌, ಮೆಹಬೂಬ್‌ ಅರಿಕೇರಿ, ನಿಂಗಪ್ಪ ಪೇಂಟರ್‌, ದೇವರಾಜ ಮ್ಯಾಗಳಮನಿ, ಬಸವರಾಜ ಕೆಳಗೇರಿ , ನಿಂಗಪ್ಪ, ಮೌನೇಶ ಬುಳ್ಳಾಪುರ, ಸುಭಾಷ್‌, ವೆಂಕಟೇಶ, ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.