ADVERTISEMENT

ಮುದಗಲ್: ಹಸನ್-ಹುಸೇನರ ಮುಖಾಮುಖಿ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:48 IST
Last Updated 10 ಆಗಸ್ಟ್ 2022, 4:48 IST
ಮುದಗಲ್‌ ಕೋಟೆಯ ಮುಂಭಾಗದಲ್ಲಿ ಇಮಾಮ್ ಹಸನ್ ಮತ್ತು ಹುಸೇನ್ ಭೇಟಿ ಜರುಗಿತು
ಮುದಗಲ್‌ ಕೋಟೆಯ ಮುಂಭಾಗದಲ್ಲಿ ಇಮಾಮ್ ಹಸನ್ ಮತ್ತು ಹುಸೇನ್ ಭೇಟಿ ಜರುಗಿತು   

ಮುದಗಲ್: ಮೊಹರಂ ಹಬ್ಬದ ಕೊನೆಯ ದಿನವಾದ ಮಂಗಳವಾರ ಪಟ್ಟಣದ ಕೋಟೆಯ ಮುಂಭಾಗದಲ್ಲಿ ಇಮಾಮ್ ಹಸನ್ ಮತ್ತು ಹುಸೇನ್ ದೇವರ ಭೇಟಿ ಜರುಗಿತು.

ಮೇಗಳಪೇಟೆಯ ಮಸೀದಿಯಿಂದ ಹಸನ್, ಕಿಲ್ಲಾದಿಂದ ಹುಸೇನ್ ದೇವರನ್ನ ಭಾಜಾ ಭಜಂತ್ರಿ, ಅಲೈ ಹಾಡು, ಹಳ್ಳಳ್ಳಿ ಬುಕ್ಕ, ಹೆಜ್ಜೆ ಮೇಳಗಳ ಮೂಲಕ ಮೆರವಣಿಗೆಯಲ್ಲಿ ಕೋಟೆ ಮುಂಭಾಗಕ್ಕೆ ಕರೆ ತಂದರು.

ರಾಜ್ಯದ ನಾನಾ ಕಡೆಯಿಂದ ಆಗಮಿಸಿದ ಬಾರಿ ಜನಸ್ತೋಮದ ನಡುವೆ ಹಸನ್-ಹುಸೇನರ ಭೇಟಿ ಜರುಗಿತು.

ADVERTISEMENT

ಶಾಸಕರಾದ ಡಿ.ಎಸ್. ಹೂಲಗೇರಿ, ಅಮರೇಗೌಡ ಪಾಟೀಲ ಬಯ್ಯಾಪುರ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಕಾಂಗ್ರೆಸ್ ಮುಖಂಡ ರುದ್ರಯ್ಯ, ಜೆಡಿಎಸ್ ಮುಖಂಡ ಸಿದ್ದು ಬಂಡಿ, ಲಿಂಗಸುಗೂರು ಉಪ ವಿಭಾಗಾಧಿಕಾರಿ ರಾಹುಲ್ ಸಂಕನೂರು, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಹುಸೇನಿ ಆಲಂ ದೇವರ ಸಮಿತಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಗುರುಬಸಪ್ಪ ಸಜ್ಜನ್, ಮುಖ್ಯಾಧಿಕಾರಿ ಮರಿಲಿಂಗಪ್ಪ, ಸಾಧಿಕ್ ಅಲಿ, ನ್ಯಾಮತ್ ಉಲ್ಲಾ ಖಾದ್ರಿ, ದೊಡ್ಡ ಸಿದ್ದಯ್ಯ, ಸಣ್ಣ ಸಿದ್ದಯ್ಯ ಇದ್ದರು.

ದೇವರ ಭೇಟಿ ನೀಡುವ ದರ್ಶನ ಪಡೆಯುವುದಕ್ಕೆ ವಿಐಪಿ ಗ್ಯಾಲರಿಯಲ್ಲಿ ಸಾಮಾನ್ಯ ಜನರು ಕುಳಿತ್ತಿದ್ದು ಕಂಡ ಶಾಸಕ ಹೂಲಗೇರಿ ಅವರು ಮುಖ್ಯಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.