ADVERTISEMENT

ಮಸ್ಕಿ: ಗರ್ಭಿಣಿಯನ್ನು ರಕ್ಷಿಸಲು ಪ್ರವಾಹದಲ್ಲಿ ಅಂಬುಲೆನ್ಸ್‌ ಚಲಾಯಿಸಿದ ಚಾಲಕ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 3:03 IST
Last Updated 9 ಸೆಪ್ಟೆಂಬರ್ 2022, 3:03 IST
ಮಸ್ಕಿ ಸಮೀಪದ ವೆಂಕಟಾಪೂರ ಹಳ್ಳದ ಪ್ರವಾಹದಲ್ಲಿ ತುಂಬು ಗರ್ಭಿಣಿ ಮಹಿಳೆಯನ್ನು 108 ಅಂಬುಲೈನ್ಸ್ ವಾಹನದಲ್ಲಿ ಸಿಂಧನೂರು ತಾಲ್ಲೂಕು ಆಸ್ತತ್ರೆಗೆ ಸೇರಿಸಿದ ಘಟನೆ ಬುಧವಾರ ನಡೆದಿದೆ
ಮಸ್ಕಿ ಸಮೀಪದ ವೆಂಕಟಾಪೂರ ಹಳ್ಳದ ಪ್ರವಾಹದಲ್ಲಿ ತುಂಬು ಗರ್ಭಿಣಿ ಮಹಿಳೆಯನ್ನು 108 ಅಂಬುಲೈನ್ಸ್ ವಾಹನದಲ್ಲಿ ಸಿಂಧನೂರು ತಾಲ್ಲೂಕು ಆಸ್ತತ್ರೆಗೆ ಸೇರಿಸಿದ ಘಟನೆ ಬುಧವಾರ ನಡೆದಿದೆ   

ಮಸ್ಕಿ : ರಾಯಚೂರು ಜಿಲ್ಲೆಯ ಹಲವೆಡೆ ಸುರಿದ ಮಳೆಗೆ ರಸ್ತೆ, ಸೇತುವೆಗಳು ಜಲಾವೃತವಾಗಿವೆ. ತಾಲೂಕಿನ ವೆಂಕಟಾಪುರ ಗ್ರಾಮದ ಹಳ್ಳದ ಸೇತುವೆ ಮುಳುಗಿದ್ದರಿಂದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪರದಾಡಬೇಕಾಯ್ತು. ಸೇತುವೆ ಮೇಲೆ ಹರಿಯುತ್ತಿದ್ದ ನೀರಿ‌ನ ಪ್ರವಾಹದಲ್ಲೇ 108 ಆಂಬ್ಯುಲೆನ್ಸ್​ ಮೂಲಕ ಗರ್ಭಿಣಿಯನ್ನು ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯ್ತು.

108 ಆಂಬುಲೆನ್ಸ್ ಚಾಲಕ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ಬಸವಲಿಂಗ ಸಾಹಸ ಮಾಡಿ ವೆಂಕಟಾಪುರದಿಂದ ಗರ್ಭಿಣಿ ಮಹಿಳೆಯನ್ನು‌ ಕರೆದೊಯ್ದು ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ದುರಗಮ್ಮ (25) ಎಂಬ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
108 ಆಂಬ್ಯುಲೆನ್ಸ್​ ಸಿಬ್ಬಂದಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT