ಮಸ್ಕಿ: ಪಟ್ಟಣದ ಭ್ರಮರಾಂಬ ಮಲ್ಲಿಕಾರ್ಜುನ ಬೆಟ್ಟದ ಅಡಿಯಲ್ಲಿರುವ ಮಹಾನಂದಿ ವಿಗ್ರಹಕ್ಕೆ ಹೊಸ ಕಳೆ ನೀಡುವ ಕಾರ್ಯ ಭರದಿಂದ ಸಾಗಿದೆ.
ನೂರಾರು ವರ್ಷ ಹಳೆಯದಾದ ಬೃಹತ್ ಕಲ್ಲಿನಲ್ಲಿ ಮೂಡಿದ ನಂದಿ ವಿಗ್ರಹಕ್ಕೆ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಮಾನ್ವಿ ತಾಲ್ಲೂಕಿನ ಶಿಲ್ಪಿ ವೀರೇಶ ಜಾನೆಕಲ್ ನೇತೃತ್ವದ ರಮೇಶ, ಮಂಜುನಾಥ ಇಲಕಲ್ ಅವರನ್ನು ಒಳಗೊಂಡ ತಂಡ ಕಳೆದೊಂದು ವಾರದಿಂದ ಕೆತ್ತನೆ ಕಾರ್ಯದಲ್ಲಿ ತೊಡಗಿದೆ.
ಭ್ರಮರಾಂಬ ದೇವಸ್ಥಾನದ ಪಕ್ಕದ ಮೆಟ್ಟಿಲುಗಳ ಮೇಲಿರುವ ನಂದಿ ವಿಗ್ರಹವನ್ನು ಈ ಹಿಂದೆ ಎರಡು ಬಾರಿ ಕೆತ್ತಲಾಗಿತ್ತು. ಈ ಬಾರಿ ನುರಿತ ಶಿಲ್ಪಿಗಳಿಂದ ಶ್ರೀಶೈಲ ಕ್ಷೇತ್ರದಲ್ಲಿರುವ ನಂದಿ ವಿಗ್ರಹದ ಮಾದರಿಯಲ್ಲಿ ಕೆತ್ತನೆ ಮಾಡಿಸಲು ತಿರ್ಮಾನಿಸ ಲಾಯಿತು. ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯ ಈ ತೀರ್ಮಾನಕ್ಕೆ ಭಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.