ADVERTISEMENT

ಹಟ್ಟಿಚಿನ್ನದಗಣಿ: ನವಿಲುಧಾಮ ಸ್ಧಾಪನೆಗೆ ಒತ್ತಾಯ 

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 12:07 IST
Last Updated 13 ಸೆಪ್ಟೆಂಬರ್ 2020, 12:07 IST
ವಂದಲಿ ಹೂಸೂರು ಗ್ರಾಮದಲ್ಲಿ ನವಿಲುಗಳ ಕಾಳು ತಿನ್ನುತ್ತಿರುವುದು
ವಂದಲಿ ಹೂಸೂರು ಗ್ರಾಮದಲ್ಲಿ ನವಿಲುಗಳ ಕಾಳು ತಿನ್ನುತ್ತಿರುವುದು   

ಹಟ್ಟಿಚಿನ್ನದಗಣಿ: ಆನ್ವರಿ, ರೋಡಲಬಂಡ, ಕೋಠಾ ಹಾಗೂ ಗುರುಗುಂಟಾ ಸುತ್ತಮುತ್ತ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನೂರಾರು ಸಂಖ್ಯೆಯ ನವಿಲುಗಳಿವೆ. ಆದ್ದರಿಂದ ಸರ್ಕಾರ ನವಿಲು ಧಾಮ ಸ್ಧಾಪನೆಗೆ ಮುಂದಾಗಬೇಕು ಎಂದು ಪ್ರವಾಸಿಗರು ಒತ್ತಾಯಿಸುತ್ತಾರೆ.

ಹಟ್ಟಿ ಪಟ್ಟಣದಿಂದ 13 ಕಿ.ಮೀ ದೂರದಲ್ಲಿರುವ ವಂದಲಿ ಮಾರುತಿ ದೇವಸ್ಧಾನಕ್ಕೆ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಇಲ್ಲಿ ನವಿಲುಧಾಮ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ.

ಬೇಟೆಗಾರರಿಗೆ ಬಲಿಯಾಗುತ್ತಿರುವ ನವಿಲುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕು. ನವಿಲುಧಾಮ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು ಎನ್ನುವುದು ಪಕ್ಷಿ ಪ್ರಿಯ ಲಿಂಗರಾಜ, ಅಂಬಣ್ಣ, ವೆಂಕೋಬ ಹಾಗೂ ಅವರ ಆಗ್ರಹ.

ADVERTISEMENT

ನಿರ್ಲಕ್ಷ್ಯ ಮಾಡಿದರೆ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಯುವಕರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.