ADVERTISEMENT

ರಾಯಚೂರು | ತೊಗರಿಗೆ ಗೊಡ್ಡು ರೋಗ: ಆತಂಕದಲ್ಲಿ ರೈತ

ಅಧಿಕಾರಿಗಳು ನೆರವಿಗೆ ಧಾವಿಸಿ ಪರಿಹಾರ ಒದಗಿಸಲು ಒತ್ತಾಯ

ಅಮರೇಶ ನಾಯಕ
Published 21 ನವೆಂಬರ್ 2025, 6:24 IST
Last Updated 21 ನವೆಂಬರ್ 2025, 6:24 IST
ಗೌಡೂರು ಗ್ರಾಮದಲ್ಲಿ ರೈತ ಬೆಳೆದ ತೊಗರಿ ಬೆಳೆ ಗೊಡ್ಡು ಬಿದ್ದಿರುವುದು
ಗೌಡೂರು ಗ್ರಾಮದಲ್ಲಿ ರೈತ ಬೆಳೆದ ತೊಗರಿ ಬೆಳೆ ಗೊಡ್ಡು ಬಿದ್ದಿರುವುದು   

ಹಟ್ಟಿ ಚಿನ್ನದ ಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ತೊಗರಿ ಬೆಳೆಗೆ ಗೊಡ್ಡು ರೋಗ ಕಾಣಿಸಿಕೊಂಡಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಗೌಡೂರು, ಪೈದೊಡ್ಡಿ, ಯಜರಂತಿ, ಬಂಡೆಭಾವಿ, ಮಾಚನೂರು, ಯಲಗಟ್ಟಾ, ಗದ್ದಿಗಿ ತಾಂಡಾ, ಗುರುಗುಂಟಾ, ಕೋಠಾ, ಮೇದಿನಾಪುರ, ನಿಲೋಗಲ್, ವೀರಾಪುರ, ಆನ್ವರಿ, ಗೆಜ್ಜಲಗಟ್ಟಾ ಸೇರಿದಂತೆ ಇತರೆ ಗ್ರಾಮದಲ್ಲಿ ಸೂಮಾರು 1,450 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ.

ರೈತರು ಬೆಳೆದ ಹತ್ತಿ, ಸೂರ್ಯಕಾಂತಿ, ಸಜ್ಜೆ, ಎಳ್ಳು ಸೇರಿದಂತೆ ಇತರೆ ಬೆಳೆಗಳು ಅತಿವೃಷ್ಟಿಯಿಂದಾಗಿ ಹಾನಿಯಾಗಿವೆ. ಉಳಿದ ಅಲ್ಪಸ್ವಲ್ಪ ತೊಗರಿ ಬೆಳೆಗೂ ಇದೀಗ ಗೊಡ್ಡು ರೋಗ ಬಂದಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಗೌಡೂರು ಗ್ರಾಮದ ರೈತರು.

ADVERTISEMENT

ರೋಗ ಸೊಂಕಿತ ಗಿಡಗಳು ಹೂವು ಬಿಡುವುದಿಲ್ಲ. ತಡವಾಗಿ ರೋಗ ತಗುಲಿದ ಗಿಡಗಳು ಹೂವು ಬಿಟ್ಟರೂ ಕಾಯಿ ಕಟ್ಟುವುದಿಲ್ಲ. ಕೆಲವು ಕಾಯಿ ಬಿಟ್ಟರೂ ಬಲಿಯುವುದಿಲ್ಲ. ರೋಗ ಹತೋಟಿಗೆ ತರಲು ಔಷಧ ಸಿಂಪಡಣೆ ಮಾಡಿದರೂ ಪ್ರಯೋಜವಾಗುತ್ತಿಲ್ಲ. ಇದರಿಂದ ತೊಗರಿ ಇಳುವರಿ ಕುಠಿತವಾಗಲಿದೆ ಎನ್ನುತ್ತಾರೆ ರೈತರು.

ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದು, ತೊಗರಿ ಕಾಯಿ ಕಟ್ಟುವ ಹಂತದಲ್ಲಿ ರೋಗದ ಭೀತಿ ಎದುರಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ರೈತರ ನೆರವಿಗೆ ಧಾವಿಸಿ ಪರಿಹಾರ ಒದಗಿಸಲು ಮುಂದಾಗಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

ಗುರುಗುಂಟಾ ರೈತ ಸಂಪರ್ಕ ಕೇಂದ್ರದಿಂದ ವಿತರಿಸಿದ ತೊಗರಿ ಬಿತ್ತನೆ ಬೀಜ ಕಳಪೆಯಾಗಿದೆ. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ತಜ್ಞರು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳು ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಬೇಕು. ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಹೋರಾಟ ನಡೆಸಬೇಕಾಗುತ್ತದೆ.
– ಕ್ಯಾತನಗೌಡ, ಮಾಚನೂರು ರೈತ
ತೊಗರಿ ಬೆಳೆಗೆ ಗೊಡ್ಡು ರೋಗ ತಗುಲಿದ್ದು ಸಂಬಂಧಿಸಿದ ಅಧಿಕಾರಿಗಳು ರೈತರ ನೆರವಿಗ ಬರಬೇಕು.
– ಬಸವರಾಜ ಗೌಡೂರು, ಪ್ರಧಾನ ಕಾರ್ಯದರ್ಶಿ ರಾಜ್ಯ ರೈತ ಸಂಘ ಹಸಿರು ಸೇನೆ
ರೈತರು ಆತಂಕ ಪಡೆದೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು.
– ಹನುಮಂತ ರಾಠೋಡ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಗುರುಗುಂಟಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.