ADVERTISEMENT

ಸಿರವಾರ: ಪಿಂಚಣಿ ಅದಾಲತ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 8:43 IST
Last Updated 13 ಡಿಸೆಂಬರ್ 2019, 8:43 IST
ಸಿರವಾರ ತಾಲ್ಲೂಕಿನ ನವಲಕಲ್ಲು ಗ್ರಾಮದಲ್ಲಿ ಗುರುವಾರ ಮಲ್ಲಟ ನಾಡ ಕಚೇರಿ ವತಿಯಿಂದ ಏರ್ಪಡಿಸಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಅನ್ನು ತಹಶೀಲ್ದಾರ್ ಕೆ.ಶ್ರುತಿ ಉದ್ಘಾಟಿಸಿದರು
ಸಿರವಾರ ತಾಲ್ಲೂಕಿನ ನವಲಕಲ್ಲು ಗ್ರಾಮದಲ್ಲಿ ಗುರುವಾರ ಮಲ್ಲಟ ನಾಡ ಕಚೇರಿ ವತಿಯಿಂದ ಏರ್ಪಡಿಸಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಅನ್ನು ತಹಶೀಲ್ದಾರ್ ಕೆ.ಶ್ರುತಿ ಉದ್ಘಾಟಿಸಿದರು   

ಸಿರವಾರ: 'ಬಡವರು, ವೃದ್ಧರ ಅನುಕೂಲಕ್ಕಾಗಿ ಸರ್ಕಾರ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು' ಎಂದು ತಹಶೀಲ್ದಾರ್ ಕೆ.ಶ್ರುತಿ ಸಲಹೆ ನೀಡಿದರು.

ತಾಲ್ಲೂಕಿನ ಮಲ್ಲಟ ನಾಡಕಚೇರಿ ವತಿಯಿಂದ ನವಲಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಗುರುವಾರ ನಡೆದ ಕಂದಾಯ ಹಾಗೂ ಪಿಂಚಣಿ ಅದಾಲತ್ ಉದ್ಘಾಟಿಸಿ ಅವರು
ಮಾತನಾಡಿದರು.

ಪಹಣಿ, ಭೂ ದಾಖಲೆಗೆ ಸಂಬಂಧಪಟ್ಟ ತಿದ್ದುಪಡಿ ಮಾಡಲು ಕಾಲಾವಕಾಶ ಬೇಕಾಗುತ್ತದೆ. ಇದಕ್ಕೆ ಸಹಕರಿಸಬೇಕು ಎಂದರು.

ADVERTISEMENT

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಇಂತಹ ಅದಾಲತ್ ಏರ್ಪಡಿಸಲಾಗಿದೆ. ಇನ್ನುಳಿದಂತೆ ಯಾವುದೇ ಸಮಸ್ಯೆಗಳಿಗೆ ನೇರವಾಗಿ ಸಿರವಾರ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಬೇಕು ಎಂದು ಹೇಳಿದರು.

ಉಪ ತಹಶೀಲ್ದಾರ್ ಸ್ವಾಮಿ ವಿವೇಕಾನಂದ, ನವಲಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲ್ಲನಗೌಡ ಮುರ್ಕಿಗುಡ್ಡ, ಗ್ರಾಮ ಲೆಕ್ಕಾಧಿಕಾರಿ ನಾಗೇಂದ್ರ,‌ ಶಿಕ್ಷಕ ಗೋಪಾಲದಾಸ್ ಮತ್ತು ಮಲ್ಲಟ, ಬಾಗಲವಾಡ, ಮುರ್ಕಿಗುಡ್ಡ, ನವಲಕಲ್ಲು ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.