ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಚಿಂಚರಕಿ ಸರ್ಕಾರಿ ಶಾಲೆಗೆ ಪಡಿತರ ಪೂರೈಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 0:33 IST
Last Updated 16 ಸೆಪ್ಟೆಂಬರ್ 2025, 0:33 IST
ಕವಿತಾಳ ಸಮೀಪದ ಚಿಂಚರಕಿ ಸರ್ಕಾರಿ ಶಾಲೆಗೆ ಸೋಮವಾರ ಪಡಿತರ ಪೂರೈಕೆ ಮಾಡಲಾಯಿತು
ಕವಿತಾಳ ಸಮೀಪದ ಚಿಂಚರಕಿ ಸರ್ಕಾರಿ ಶಾಲೆಗೆ ಸೋಮವಾರ ಪಡಿತರ ಪೂರೈಕೆ ಮಾಡಲಾಯಿತು   

ಕವಿತಾಳ (ರಾಯಚೂರು ಜಿಲ್ಲೆ): ಸಮೀಪದ ಚಿಂಚರಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಬಿಸಿಯೂಟದ ಪಡಿತರ ಪೂರೈಕೆ ಮಾಡಲಾಗಿದೆ.

‘ಬಿಸಿಯೂಟಕ್ಕೆ ಪಡಿತರ ಪೂರೈಕೆ ಸ್ಥಗಿತ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಸೆ.14ರ  ಸಂಚಿಕೆಯಲ್ಲಿ ಪ್ರಕಟವಾಗಿದ್ದ ವರದಿಗೆ ಸ್ಪಂದಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಭಾಕರ, ಪಡಿತರ ಪೂರೈಕೆಗೆ ಕ್ರಮ ಕೈಗೊಂಡಿದ್ದಾರೆ.

‘ವಾರದಿಂದ ಸಮಸ್ಯೆ ಉಂಟಾಗಿತ್ತು. 4 ದಿನದಿಂದ ಸ್ಥಳೀಯರೇ ಪಡಿತರ ನೀಡಿದ್ದರು. ವರದಿ ಆಧರಿಸಿ ಅಧಿಕಾರಿಗಳು ಕ್ರಮವಹಿಸಿದ್ದಾರೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮುದೆಪ್ಪ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.