ADVERTISEMENT

ಮನುವಾದಿಗಳಿಂದ ಸಂವಿಧಾನದ ಅಪಪ್ರಚಾರ: ಅಪ್ಪಗೆರೆ ಸೋಮಶೇಖರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:44 IST
Last Updated 21 ಡಿಸೆಂಬರ್ 2025, 6:44 IST
<div class="paragraphs"><p>ಸಮ್ಮೇಳನದ ಗೋಷ್ಠಿಯಲ್ಲಿ ಕಲಬುರಗಿ ಕೇಂದ್ರೀಯ ವಿವಿ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಮಾತನಾಡಿದರು</p></div>

ಸಮ್ಮೇಳನದ ಗೋಷ್ಠಿಯಲ್ಲಿ ಕಲಬುರಗಿ ಕೇಂದ್ರೀಯ ವಿವಿ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಮಾತನಾಡಿದರು

   

ರಾಯಚೂರು: ‘ಡಾ.ಅಂಬೇಡ್ಕರ್, ಒಂದು ಜಾತಿ, ವರ್ಗದ ಅನುಕೂಲಕ್ಕಾಗಿ ಸಂವಿಧಾನ ರಚಿಸಿಲ್ಲ. ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ. ಅದರ ವಿರುದ್ಧ ಮನುವಾದಿಗಳು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಕಲಬುರಗಿ ಕೇಂದ್ರೀಯ ವಿವಿ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನದ ‘ಸರ್ವರಿಗೂ ಸಂವಿಧಾನ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿ, ‘ದೇಶದ ಸ್ವಾತಂತ್ರ್ಯ ನಂತರ ಸಂವಿಧಾನ ಅನುಷ್ಠಾನ ಗೊಳಿಸಿಕೊಂಡು ಪ್ರತಿಯೊಬ್ಬರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡು, ಕಾನೂನಿನ ಚೌಕಟ್ಟಿನೊಳಗೆ ಇಚ್ಛಾನುಸಾರ ಜೀವಿಸುವ ಹಕ್ಕನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಮಹಿಳೆಯರು, ದಲಿತರು, ಬುಡಕಟ್ಟು ಹಾಗೂ ಹಿಂದುಳಿದ ಜನರು ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಸಂವಿಧಾನ ಮಾಡಿದೆ. ಆದರೆ ಇಂದು ಅದಕ್ಕೆ ಅಪಮಾನವೆಂಬಂತೆ ನಡೆದುಕೊಳ್ಳುವ ಘಟನೆಗಳು ಮರುಕಳುಹಿಸುತ್ತಿವೆ’ ಎಂದರು.

ADVERTISEMENT

‘ಪ್ರತಿಯೊಬ್ಬರೂ ಮೂಲಅಗತ್ಯಗಳಾದ ಆಹಾರ, ವಸತಿ, ಅಗತ್ಯಕ್ಕೆ ತಕ್ಕ ಸೌಲಭ್ಯ ಹೊಂದುವಂತೆ ಸಂವಿಧಾನ ಅವಕಾಶ ಕಲ್ಪಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ತಾನು ಇಚ್ಛಿಸಿದ ಹುದ್ದೆ, ಧರ್ಮ ಮತ್ತು ವೈಯಕ್ತಿಕ ಜೀವನ ರೂಪಿಸಿಕೊಳ್ಳುವ ವ್ಯವಸ್ಥೆ ನೀಡಿದೆ. ಸರ್ವರ ಕಲ್ಯಾಣ, ಜನಾಂಗೀಯ ಕಲ್ಯಾಣವನ್ನು ಸಂವಿಧಾನ ಬಯಸುತ್ತದೆ’ ಎಂದು ತಿಳಿಸಿದರು. 

‘ಅಂಬೇಡ್ಕರ್, ಪರಿಶಿಷ್ಟ ಜಾತಿಯವರಿಗಾಗಿ ಮಾತ್ರವಲ್ಲದೆ, ಎಲ್ಲ ಸಮುದಾಯದ ಒಳಿತಿಗಾಗಿ ಸಂವಿಧಾನದ ರಚಿಸಿದ್ದಾರೆ. ಆದರೆ ಈವರೆಗೂ ದಲಿತರು ದೇಶದ ಪ್ರಧಾನಮಂತ್ರಿ ಆಗಲಿಲ್ಲ. ರಾಜ್ಯದ ಸಿಎಂ ಆಗಲಿಲ್ಲ. ಇದು ಸಂವಿಧಾನದ ಬಗ್ಗೆ ಅಪ್ರಚಾರ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ದಾವಣಗೆರೆ ವಿವಿ ಪ್ರಾಧ್ಯಾಪಕ ವಿಜಯಕುಮಾರ ಎಚ್.ಜಿ., ಪ್ರಾಧ್ಯಾಪಕ ಉಮಾಶಂಕರ ಕರಿಗೂಳಿ ಸುಂಕೇಶ್ವರ, ಐಚನಹಳ್ಳಿ ಕೃಷ್ಣಪ್ಪ, ಅನಿಲ ಟೆಂಗಳಿ, ಸೋಮಕ್ಕ ಎಂ., ಹುಸೇನಪ್ಪ ಅಮರಾಪುರ, ಹೋರಾಟಗಾರ ರವೀಂದ್ರ ಪಟ್ಟಿ, ರಾಯಚೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ನಾಯಕ, ಪ್ರಾಚಾರ್ಯ ಸುಭಾಷ್‌ಚಂದ್ರ ಕೌಲಗಿ, ಭೀಮಾಶಂಕರ, ಪರಮಾನಂದ ಹಂಗರಗಿ, ಸುರೇಶ ಮಾಚನೂರು, ಸುನೀಲ ಜಾಬಾದಿ, ಅಮರೇಶ ವೆಂಕಟಾಪುರ, ಪೀರಪ್ಪ ಸಜ್ಜನ, ಹುಲಿಯಪ್ಪ ನಾಯಕ, ಈಶ್ವರ ಹಲಗಿ, ಆಂಜನೇಯ ರಾಮತ್ನಾಳ, ಹನುಮಂತಪ್ಪ ಚಿಕ್ಕಕಡಬೂರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.