ಸಿಂಧನೂರು: ‘ತಾಲ್ಲೂಕಿನ ತುಂಗಭದ್ರಾ ಜಲಾಶಯದ ಎಡದಂಡೆ ವ್ಯಾಪ್ತಿಯ 40ನೇ ವಿತರಣಾ ಕಾಲುವೆಯ ಕೆಳಭಾಗದಲ್ಲಿ ಜಮೀನಿನಲ್ಲಿ ಬೆಳೆದ ಜೋಳದ ಬೆಳೆ ತಕ್ಷಣ ನೀರು ಪೂರೈಸಬೇಕು’ ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲ್ಲೂಕು ಘಟಕದ ವತಿಯಿಂದ ಗುರುವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
‘ರೈತರು ನಿರಂತರವಾಗಿ ನೀರಿಗಾಗಿ ತಹಶೀಲ್ದಾರ್ ಕಚೇರಿ ಮತ್ತು ನೀರಾವರಿ ಇಲಾಖೆಗೆ ಅಲೆದಾಡಿದರೂ ನೀರು ಹರಿಸಿಲ್ಲ. ನ.3 ರಿಂದ ಮಿನಿವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಕುಳಿತುಕೊಳ್ಳುತ್ತೇವೆ’ ಎಂದು ಕಿಸಾನ್ ಸಭಾ ಸಂಚಾಲಕ ವೆಂಕನಗೌಡ ಗದ್ರಟಗಿ ತಿಳಿಸಿದರು.
ಕಿಸಾನ್ ಸಭಾ ಸಹಸಂಚಾಲಕ ಬಾಬರ್ ಪಟೇಲ್, ಮುಖಂಡರಾದ ಶಾಂತಯ್ಯಸ್ವಾಮಿ, ಸಣ್ಣ ಈರಪ್ಪ ಪೂಜಾರ್, ಹೊಳೆಯಪ್ಪ, ಹೊನ್ನೂರು ಅಲಿ, ಮೌಲಾಸಾಬ, ನಿಂಗಪ್ಪ ಗಾಳಿ, ಚಾಂದ್ ಪಟೇಲ್, ಯಲ್ಲಪ್ಪ ಕಲ್ಲೂರು, ಬುಡ್ಡಾಸಾಬ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.