ರಾಯಚೂರಿನಲ್ಲಿ ಪ್ರತಿಭಟನೆ
ರಾಯಚೂರು: ಬಾಂಗ್ಲಾದೇಶದ ಧಾರ್ಮಿಕ ಮುಖಂಡರ ಮೇಲಿನ ಹಲ್ಲೆ, ದೇವಾಲಯಗಳ ಧ್ವಂಸ ಹಾಗೂ ಅಲ್ಲಿನ ಹಿಂದೂಗಳ ಮೇಲಿನ ಆಕ್ರಮಣವನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಶಾಂತಮಲ್ಲ ಶಿವಾಚಾರ್ಯರು ಮಾತನಾಡಿ, ‘ನಾವೆಲ್ಲರೂ ಶಾಂತಿ ಪ್ರಿಯರು, ಮಡಿವಂತಿಕೆ, ಜಾತಿ ಮನೆಯಲ್ಲಿ ಇಟ್ಟುಕೊಳ್ಳಬೇಕು. ಧರ್ಮ ರಕ್ಷಣೆಗೆ ಬೀದಿಗೆ ಬರಬೇಕು. ದೇಶ, ಧರ್ಮ ರಕ್ಷಣೆಗೆ ಕಂಕಣ ಬದ್ಧರಾಗಬೇಕು. ಕೇಂದ್ರ ಸರ್ಕಾರ ಹಿಂದೂಗಳಿಗೆ ನೆರವು ನೀಡಬೇಕು. ಅನ್ಯಾಯ ತಡೆಗಟ್ಟಬೇಕು’ ಎಂದು ಮನವಿ ಮಾಡಿದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ವ್ಯವಸ್ಥಾಪಕ ಕೃಷ್ಣ ಜೋಶಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಶಾಸಕ ಶಿವರಾಜ ಪಾಟೀಲ, ಹಿಂದೂ ಹಿತರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಶೋಕ ಪಾಟೀಲ ಅತ್ನೂರು, ವಿವಿಧ ಮಠಾಧೀಶರು, ಜನ ಪ್ರತಿನಿಧಿಗಳು, ಹಿಂದೂ ಪರ ಸಂಘಟನೆಗಳು, ಕಾಲೇಜು ವಿಧ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.