ADVERTISEMENT

ಮಸ್ಕಿ | ಎಂಎಸ್ಐಎಲ್ ಮಳಿಗೆ ಎದುರು ಪ್ರತಿಭಟನೆ

ಜನವಸತಿ ಪ್ರದೇಶದಲ್ಲಿ ಮದ್ಯ ಮಾರಾಟ ಮಳಿಗೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 6:57 IST
Last Updated 4 ಡಿಸೆಂಬರ್ 2022, 6:57 IST
ಮಸ್ಕಿ ಪಟ್ಟಣದ ಐದನೇ ವಾರ್ಡ್‌ನ ಹೆದ್ದಾರಿ ಪಕ್ಕದಲ್ಲಿ ಆರಂಭಿಸಲು ಉದ್ದೇಶಿಸಿರುವ ಎಂಎಸ್ಐಎಲ್ ಮದ್ಯದ ಮಳಿಗೆಯನ್ನು ಸ್ಥಳಾಂತರಿಸುವಂತೆ ಸ್ಥಳೀಯ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿ ಅಬಕಾರಿ‌ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಮಸ್ಕಿ ಪಟ್ಟಣದ ಐದನೇ ವಾರ್ಡ್‌ನ ಹೆದ್ದಾರಿ ಪಕ್ಕದಲ್ಲಿ ಆರಂಭಿಸಲು ಉದ್ದೇಶಿಸಿರುವ ಎಂಎಸ್ಐಎಲ್ ಮದ್ಯದ ಮಳಿಗೆಯನ್ನು ಸ್ಥಳಾಂತರಿಸುವಂತೆ ಸ್ಥಳೀಯ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿ ಅಬಕಾರಿ‌ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು   

ಮಸ್ಕಿ: ಪಟ್ಟಣದ ಐದನೇ ವಾರ್ಡ್‌ನ ಜನವಸತಿ ಪ್ರದೇಶದಲ್ಲಿ ಎಂಎಸ್ಐಎಲ್‌ ಮದ್ಯ ಮಾರಾಟ ಮಳಿಗೆಯನ್ನು ತೆರೆದಿರುವುದನ್ನು ವಿರೋಧಿಸಿ ಶನಿವಾರ ಸ್ಥಳೀಯ ನಿವಾಸಿಗಳ ಪ್ರತಿಭಟನೆ ನಡೆಸಿ ಮಳಿಗೆಯನ್ನು ಬಂದ್‌ ಮಾಡಿಸಿದರು.

ಖಾಸಗಿ ವ್ಯಕ್ತಿಯೊಬ್ಬರು ಎಂಎಸ್ಐಎಲ್‌ನಿಂದ ಮದ್ಯ ಮಾರಾಟ ಪರವಾನಗಿ ಪಡೆದು‌ ಶನಿವಾರ ಅಧಿಕೃತ ಮಳಿಗೆ ಆರಂಭಿಸಿದ್ದರು. ಸುದ್ದಿ ತಿಳಿದ ಸ್ಥಳೀಯ ನಿವಾಸಿಗಳು ವಾರ್ಡ್ ಸದಸ್ಯ ಶರಣಯ್ಯ ಸೊಪ್ಪಿಮಠ ನೇತೃತ್ವದಲ್ಲಿ ಮಳಿಗೆ ಮುಂದೆ ಪ್ರತಿಭಟನೆ ನಡೆಸಿ ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿದರು.

ಮದ್ಯ ಮಾರಾಟ ಮಳಿಗೆ ಸಮೀಪದಲ್ಲೇ ಮಠ, ಶಾಲೆ, ಬ್ಯಾಂಕ್‌ಗಳು ಇದ್ದು ಜನರಿಗೆ ತೊಂದರೆಯಾಗುತ್ತದೆ. ಕೂಡಲೇ ಮದ್ಯ ಮಾರಾಟ ಮಳಿಗೆಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಪಟ್ಟು ಹಿಡಿದು ಕುಳಿತರು. ಸ್ಥಳಕ್ಕೆ ಬಂದ ಅಬಕಾರಿ ಇಲಾಖೆಯ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು. ಪ್ರತಿಭಟನಾಕಾರರು ಪಟ್ಟು ಸಡಿಲಿಸದ ಕಾರಣ ಎಂಎಸ್ಐಎಲ್ ಮದ್ಯದ ಅಂಗಡಿಯನ್ನು ಬಂದ್ ಮಾಡಿದ ನಂತರ ಸ್ಥಳೀಯರು ಪ್ರತಿಭಟನೆ ಹಿಂಪಡೆದರು.

ADVERTISEMENT

ಜನವಸತಿ ಪ್ರದೇಶ ಹೊರತು ಪಡಿಸಿ ಮಳಿಗೆ ಆರಂಭಿಸಲಿ, ಪುನಃ ಇದೇ ಸ್ಥಳದಲ್ಲಿ ಮಳಿಗೆ ಆರಂಭಿಸಲು ಅನುಮತಿ ಕೊಟ್ಟರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಪುರಸಭೆ ಸದಸ್ಯ ಶರಣಯ್ಯ ಸೊಪ್ಪಿಮಠ ಎಚ್ಚರಿಸಿದರು. ಮಹಿಳೆಯರು ಸೇರಿದಂತೆ ಸ್ಥಳೀಯ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.