ADVERTISEMENT

ಟಿಟಿಡಿಯಿಂದ ಮಂತ್ರಾಲಯಕ್ಕೆ ಬಂದ ಶ್ರೀವಾರಿ ವಸ್ತ್ರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:45 IST
Last Updated 9 ಆಗಸ್ಟ್ 2025, 4:45 IST
<div class="paragraphs"><p>ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಶನಿವಾರ ತಿರುಪತಿ ತಿರುಮಲ ದೇವಸ್ಥಾನದ ಎಇಒ ರಾಮಕೃಷ್ಣ ಅವರು ಟಿಟಿಡಿಯಿಂದ ಶ್ರೀವಾರಿ ವಸ್ತ್ರವನ್ನು ತಂದರು</p></div>

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಶನಿವಾರ ತಿರುಪತಿ ತಿರುಮಲ ದೇವಸ್ಥಾನದ ಎಇಒ ರಾಮಕೃಷ್ಣ ಅವರು ಟಿಟಿಡಿಯಿಂದ ಶ್ರೀವಾರಿ ವಸ್ತ್ರವನ್ನು ತಂದರು

   

ಮಂತ್ರಾಲಯ (ರಾಯಚೂರು): ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಆರಂಭವಾಗಿರುವ ಸಪ್ತರಾತ್ರೋತ್ಸವಕ್ಕೆ ಶನಿವಾರ ತಿರುಪತಿ ತಿರುಮಲ ದೇವಸ್ಥಾನದ ಎಇಒ ರಾಮಕೃಷ್ಣ ಅವರು ಟಿಟಿಡಿಯಿಂದ ಮಂತ್ರಾಲಯಕ್ಕೆ ಶ್ರೀವಾರಿ ವಸ್ತ್ರವನ್ನು ತಂದರು.

ಶ್ರೀ ಮಠದ ಅಧಿಕಾರಿಗಳು ಮತ್ತು ಪಂಡಿತರು ತಿರುಪತಿ ತಿರುಮಲ ದೇವಸ್ಥಾನದ ಅಧಿಕಾರಿಗಳ ತಂಡವನ್ನು ಮಹಾದ್ವಾರದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದರು ಮತ್ತು ಅವರು ಮದ್ವ ಕಾರಿಡಾರ್ ಮೂಲಕ ಶ್ರೀ ಮಠಕ್ಕೆ ಕರೆ ತಂದರು.

ADVERTISEMENT

ಮಠದ ಪ್ರವೇಶದಲ್ಲೇ ಇರುವ ಶ್ರೀ ಮಂಚಲಮ್ಮನಿಗೆ ಸೀರೆ ಅರ್ಪಿಸಿದ ನಂತರ, ಶ್ರೀ ರಾಮಕೃಷ್ಣರು ಗೌರವಯುತವಾಗಿ ಶ್ರೀವಾರಿ ವಸ್ತ್ರವನ್ನು ಶ್ರೀ ಸುಬುಧೇಂದ್ರ ತೀರ್ಥರಿಗೆ ಹಸ್ತಾಂತರಿಸಿದರು. ನಂತರ ಶ್ರೀ ಸ್ವಾಮೀಜಿಯವರು ಭಕ್ತಿಯಿಂದ ಶ್ರೀ ರಾಯರ ಮೂಲ ಬೃಂದಾವನಕ್ಕೆ ವಸ್ತ್ರವನ್ನು ಅರ್ಪಿಸಿ ಆರತಿ ಬೆಳಗಿದರು.

ನಂತರ, ಟಿಟಿಡಿ ಅಧಿಕಾರಿಗಳು ಶ್ರೀವಾರಿ ಶೇಷವಸ್ತ್ರ ಮತ್ತು ಪ್ರಸಾದವನ್ನು ಪರಮಪೂಜ್ಯ ಶ್ರೀ ಸ್ವಾಮೀಜಿಯವರಿಗೆ ಅರ್ಪಿಸಿದರು. ಪ್ರತಿಯಾಗಿ, ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ರಾಮಕೃಷ್ಣ ಮತ್ತು ಅವರ ಕುಟುಂಬದವರಿಗೆ ಶೇಷವಸ್ತ್ರ, ಸ್ಮರಣಿಕೆ ಮತ್ತು ಫಲಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.