
ಪ್ರಜಾವಾಣಿ ವಾರ್ತೆ
ರಾಯಚೂರು: ನಗರದ ಅಂದ್ರೂನ್ ಕಿಲ್ಲಾ ಅರಬಮೊಹಲ್ಲಾದಲ್ಲಿ ಭಾನುವಾರ ಪತ್ತೆಯಾದ ಹೆಬ್ಬಾವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೋಮವಾರ ಸುರಕ್ಷಿತವಾಗಿ ಹಿಡಿದು ಮಲಿಯಾಬಾದ್ ಬೆಟ್ಟದಲ್ಲಿ ಬಿಟ್ಟಿದ್ದಾರೆ.
ಭಾನುವಾರ ಮಧ್ಯ ರಾತ್ರಿ ರಸ್ತೆ ಬದಿಗೆ ಸಂಚರಿಸಿ ಸಿಮೆಂಟ್ ಪೈಪ್ ಮೇಲೆ ಬಂದು ಕುಳಿತಿತ್ತು. ಇಲಿ, ಹೆಗ್ಗಣಗಳನ್ನು ಸೇವಿಸಲು ಬಂದಿರಬಹುದು ಎಂದು ಹೇಳಲಾಗಿದೆ. ಬಸವರಾಜ ಹಾಗೂ ಸಾರ್ವಜನಿಕರು ಹಾವನ್ನು ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
‘ಹೆಬ್ಬಾವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟಿದ್ದಾರೆ’ ಎಂದು ಆರ್‌ಎಫ್‌ಒ ರಾಜೇಶ ನಾಯಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.