ರಾಯಚೂರು: ಜಿಲ್ಲೆಯಲ್ಲಿ ನವರಾತ್ರಿ ಪ್ರಯುಕ್ತ ದೇಗುಲಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದಿವೆ. ಮಂಗಳವಾರ ವಿಶೇಷ ಹೋಮ ಹವನ ಮಾಡಲಾಯಿತು. ಭಕ್ತರು ದೇವತೆಗಳಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಣೆ ಮಾಡಿ ಭಕ್ತಿ ಸಮರ್ಪಿಸಿದರು.
ಸಂಜೆ ದೇಗುಲಗಳಲ್ಲಿ ದೇವಿ ಪುರಾಣ ಪ್ರವಚನ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇಗುಲಗಳ ಆವರಣ, ಮಂಟಪಗಳಲ್ಲಿ ಸಾಮೂಹಿಕ ದಾಂಡಿಯಾ ನೃತ್ಯ, ಗಾರ್ಭಾ ನೃತ್ಯ ಕಾರ್ಯಕ್ರಮಗಳು ಸಂಭ್ರಮದೊಂದಿಗೆ ನಡೆದವು.
ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಖುಷಿ ಹಂಚಿಕೊಂಡರು. ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು.
ಡ್ಯಾಡಿ ಕಾಲೊನಿ ಬಳಿಯ ಗಣೇಶ ಕಾಲೊನಿ ಮಹಿಳೆಯರು ಈಶ್ವರ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ದಾಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಭಕ್ತರು ನಗರದ ದುರ್ಗಾಪರಮೇಶ್ವರಿ, ಅಂಬಾಭವಾನಿ, ಅಂಬಾದೇವಿ, ಕರೆಮ್ಮ ದೇವಿ, ಏಳು ಮಕ್ಕಳ ತಾಯಿ ದೇವಸ್ಥಾನ, ತಾಯಮ್ಮ ದೇವಿ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.
ದುರ್ಗಾಷ್ಟಮಿ
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮಂಚಾಲಮ್ಮನಿಗೆ ಪವಿತ್ರ ಸುಗಂಧ ದ್ರವ್ಯದ ಅಭಿಷೇಕ ಮಾಡಿದರು. ಸಂಸ್ಕೃತ ವಿದ್ಯಾಪೀಠದ ಪಂಡಿತರು ಮತ್ತು ವಿದ್ಯಾರ್ಥಿಗಳು ವೇದ ಮಂತ್ರ ಮತ್ತು ದುರ್ಗಾ ಸೂಕ್ತದ ಮಂತ್ರ ಪಠಿಸಿದರು.
ಪಾಲಿಕೆಯಿಂದ ನಾಡದೇವಿಯ ಮೂರ್ತಿ ಮೆರವಣಿಗೆ ನಾಳೆ
ರಾಯಚೂರು: ಮಹಾನಗರ ಪಾಲಿಕೆಯಿಂದ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 2ರಂದು ಮಧ್ಯಾಹ್ನ 1 ಗಂಟೆಗೆ ಪಾಲಿಕೆ ವಲಯ–1ರ ಕಚೇರಿಯಿಂದ ಮಾಣಿಕಪ್ರಭು ಬನ್ನಿ ಮಂಟಪದವರೆಗೆ ನಾಡದೇವಿಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸುವರು. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಉಪಸ್ಥಿತರಿರುವರು.
ಶಾಸಕ ಡಾ.ಎಸ್.ಶಿವರಾಜ ಪಾಟೀಲ ನಾಡದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ.
ಮೇಯರ್ ನರಸಮ್ಮ ಮಾಡಗಿರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಕುಮಾರ ನಾಯಕ, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತಕುಮಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಉಪ ಮೇಯರ್ ಜೆ.ಸಾಜೀದ್ ಸಮೀರ್, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಪಾಲ್ಗೊಳ್ಳಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.