ಹಟ್ಟಿ ಚಿನ್ನದ ಗಣಿ: ಸಮೀಪದ ಆನ್ವರಿ ಗ್ರಾಮದಲ್ಲಿ ಹುಳು ಹತ್ತಿದ, ಜೇಡುಗಟ್ಟಿದ ಪಡಿತರ ಅಕ್ಕಿಯನ್ನು ವಿತರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸೇವನೆಗೆ ಯೋಗ್ಯವಲ್ಲದ ಪಡಿತರ ಅಕ್ಕಿ ವಿತರಿಸಲಾಗಿದೆ. ಇಂತಹ ಹಕ್ಕಿ ಸೇವನೆಯಿಂದ ಅನಾರೋಗ್ಯಕ್ಕೆ ಈಡಾದರೆ ಹೊಣೆಯಾರು ಎಂದು ಫಲಾನುಭವಿಗಳು ಪ್ರಶ್ನಿಸಿದ್ದಾರೆ.
ಹಿಂದೆಯೂ ಹುಳು ಹತ್ತಿದ, ಜೀಡಿಗಟ್ಟಿದ ಪಡಿತರ ಅಕ್ಕಿ ವಿತರಿಸಿದ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳದೆ ಜಾಣ ಕುರುಡುತನ ಪ್ರದರ್ಶಿಸಿದ್ದಾರೆ. ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ನ್ಯಾಯಬೆಲೆ ಅಂಗಡಿ ಮಾಲೀಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗೆಜ್ಜಲಗಟ್ಟಾ, ನಿಲೋಗಲ್, ಯಲಗಟ್ಟಾ ಗ್ರಾಮಗಳಲ್ಲೂ ಇದೆ ಸಮಸ್ಯೆಯಿದೆ. ‘ತಾಲ್ಲೂಕು ಗೋದಾಮಿನಿಂದ ಅಧಿಕಾರಿಗಳು ನೀಡಿದ ಅಕ್ಕಿಯನ್ನು ನೀಡಿದ್ದೇವೆ. ನೀವು ಯಾರಿಗೂ ಬೇಕಾದರೂ ಹೇಳಿಕೊಳ್ಳಿ’ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿ ಮಾಲೀಕರು.
ಬಡವರಿಗೆ ತಿನ್ನಲು ಯೋಗ್ಯವಲ್ಲದ ಪಡಿತರ ವಿತರಿಸಲಾಗಿದೆ. ಕಲ್ಲು–ಮಣ್ಣು ಮಿಶ್ರಿತ, ಕಸ ಇರುವಂತಹ ಅಕ್ಕಿಯನ್ನು ತಿನ್ನಲು ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸರ್ಕಾರದ ನಿಯಮಗಳನ್ನು ಪಾಲಿಸಬೇಕಾದ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹುಳು ಹತ್ತಿದ ಪಡಿತರವನ್ನು ವಿತರಿಸುತ್ತಿದ್ದಾರೆ. ಇಂತಹ ಅಂಗಡಿ ಮಾಲೀಕರ ವಿರುದ್ಧ ಸಂಬಂದಪಟ್ಟ ಮೇಲಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಆನ್ವರಿ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಹುಳ ಹತ್ತಿದ ಪಡಿತರ ಅಕ್ಕಿಯನ್ನು ವಿತರಿಸದಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಆದೇಶಿಸಲಾಗಿದೆಅಬ್ದಲ್ ರೋಹುಪ್ ಆಹಾರ ನೀರಿಕ್ಷಕ ಲಿಂಗಸುಗೂರು
ನ್ಯಾಯಬೆಲೆ ಅಂಗಡಿ ಮಾಲೀಕರು ಹುಳ ಹತ್ತಿದ ಜೇಡುಗಟ್ಟಿದ ಪಡಿತರವನ್ನು ವಿತರಿಸುತ್ತಿದ್ದಾರೆ. ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಲಿನಾಗರಾಜ ಆನ್ವರಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.