ರಾಯಚೂರು: ಹೆರಿಗೆ ನೋವಿನಿಂದ ಬಳಲುತ್ತಿದ್ದ ತಾಲ್ಲೂಕಿನ ಆಯಿಜಾಪುರ ಗ್ರಾಮದ ಗರ್ಭಿಣಿ ಶಾರದಾ ಅವರು ಮಂಗಳವಾರ ಆಸ್ಪತ್ರೆ ತಲುಪುವ ಮುನ್ನವೇ ಆಂಬುಲೆನ್ಸ್‌ನಲ್ಲೇ ಹೆರಿಗೆಯಾಗಿದೆ. ತಾಯಿ ಮತ್ತು ಮಗುವನ್ನು ಮಾವಿನಕೆರೆ ಸಮೀಪದ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
‘ಶಾರದಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ 108 ಆಂಬುಲೆನ್ಸ್‌ಗೆ ಕರೆ ಮಾಡಲಾಯಿತು. ಗುಂಜಳ್ಳಿಯಿಂದ ಆಂಬುಲೆನ್ಸ್ ಆಯೀಜಪುರ ಗ್ರಾಮಕ್ಕೆ ಬಂದಿದೆ. ಮಾರ್ಗ ಮಧ್ಯೆಯೇ ಹೆರಿಗೆ ನೋವು ಹೆಚ್ಚಾದ ಕಾರಣ ಶುಶ್ರೂಷಕ ಶಿವಯೋಗಿ ಅವರು ಆಂಬುಲೆನ್ಸ್‌ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿದ್ದಾರೆ’ ಕುಟುಂಬ ಸದಸ್ಯರು ತಿಳಿಸಿದರು.
ಚಾಲಕ ಶಶಿಕಾಂತ್ ಅವರೂ ನೆರವಾದರು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.