ADVERTISEMENT

ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು: ಶರಣಪ್ಪ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 8:23 IST
Last Updated 15 ಅಕ್ಟೋಬರ್ 2025, 8:23 IST
ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಮದ್ಯಪಾನ ವರ್ಜನ ಜನ ಜಾಗೃತಿ ಜಾಥಾ ಹಾಗೂ ವ್ಯಸನ ಮುಕ್ತರ ಸಮಾವೇಶದಲ್ಲಿ ರಾಜ್ಯ ಮದ್ಯಪಾನ ಸ್ವಂಯಮ ಮಂಡಳಿಯ ರಾಜ್ಯಧ್ಯಕ್ಷ ಶರಣಪ್ಪ ಮಾತನಾಡಿದರು
ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಮದ್ಯಪಾನ ವರ್ಜನ ಜನ ಜಾಗೃತಿ ಜಾಥಾ ಹಾಗೂ ವ್ಯಸನ ಮುಕ್ತರ ಸಮಾವೇಶದಲ್ಲಿ ರಾಜ್ಯ ಮದ್ಯಪಾನ ಸ್ವಂಯಮ ಮಂಡಳಿಯ ರಾಜ್ಯಧ್ಯಕ್ಷ ಶರಣಪ್ಪ ಮಾತನಾಡಿದರು    

ರಾಯಚೂರು: ‘ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು. ವಿಶೇಷವಾಗಿ ಇಂದಿನ ಯುವ ಜನರು ದುಚ್ಚಟಗಳಿಂದ ದೂರ ಉಳಿದು ಸದೃಢ ಆರೋಗ್ಯ ಕಾಯ್ದುಕೊಳ್ಳಬೇಕು‘ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸ್ವಂಯಮ ಮಂಡಳಿಯ ರಾಜ್ಯಧ್ಯಕ್ಷ ಶರಣಪ್ಪ ಸಲಹೆ ನೀಡಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಮದ್ಯಪಾನ ವರ್ಜನ ಜನ ಜಾಗೃತಿ ಜಾಥಾ ಹಾಗೂ ವ್ಯಸನ ಮುಕ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮಾದಕ ದ್ರವ್ಯ ಹಾಗೂ ಮಾದಕ ವಸ್ತುಗಳ ಸೇವನೆ ಸಾಮಾಜಿಕ ವ್ಯವಸ್ಥೆಗೆ ದೊಡ್ಡ ಪಿಡುಗಾಗಿದೆ. ದುಚ್ಚಟಗಳಿಂದ ದೂರವಿದ್ದಾಗ ಮಾತ್ರ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯವಾಗಲಿದೆ‘ ಎಂದು ತಿಳಿಸಿದರು.

‘ಧರ್ಮಸ್ಥಳದ ಜನ ಜಾಗೃತಿ ವೇದಿಕೆ ಸಹಯೋಗದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ಹಾನಿಗಳ ಕುರಿತು ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ನ ಪ್ರಾದೇಶಿಕ ನಿದೇಶಕ ಚಂದ್ರಶೇಖರ .ಜಿ ಮಾತನಾಡಿ, ‘ ವಿದ್ಯಾರ್ಧಿಗಳಿಗೆ, ಯುವಕರಿಗೆ ಚಾಕೋಲೇಟ್, ಬಿಸ್ಕೆತ್‌ಗಳ ಮೂಲಕ ಮಾದಕ ವಸ್ತ್ರಗಳು ತಲುಪುತ್ತೀವೆ. ಮಕ್ಕಳಿಗೆ ಮನೆಯಲ್ಲಿ ಸರಿಯಾದ ಸಂಸ್ಕಾರ ಕೊಡದಿದ್ದರೆ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇರುತ್ತದೆ’ ಎಂದರು.

ADVERTISEMENT

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್‌ ನಿಂದ ವ್ಯಸನ ಮುಕ್ತರನ್ನಾಗಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಸಮಾಜದ ಪ್ರತಿಯೊಬ್ಬರು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ನಗರದ ಬಸವೇಶ್ವರ ವೃತದಿಂದ ರಂಗ ಮಂದಿರದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಮೇಯರ್ ಅಧ್ಯಕ್ಷ ನರಸಮ್ಮ ಮಾಡಗಿರಿ, ಹಿರೇಮಠದ ಅಭಿನಯ ರಾಚೋಟಿವೀರ ಸ್ವಾಮೀಜಿ,

ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಅಮರೇಶ, ಲೋಕಸೇವಾ ಆಯೋಗದ ನಿಕಟ ಪೂರ್ವ ಸಂಘದ ಅಧ್ಯಕ್ಷ ನಾಗರಾಜ ಎಂ. ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ನ ನಿರ್ದೇಶಕ ಮೋಹನ ನಾಯ್ಕ, ಯೋಜನಾ ಅಧಿಕಾರಿ ಶಿವಾಜಿ ಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶರಣಮ್ಮ ಕಾಮರ, ಮಹಾಂತೇಶ ದುಸ್ತಿ ಉಪಸ್ಥಿತರಿದ್ದರು.

ಮಂಗಳವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.