ADVERTISEMENT

ರಾಯಚೂರು | ಸಿಂಧನೂರಲ್ಲಿ ಬೆಂಕಿ ಅನಾಹುತ: ನಾಲ್ಕು ಅಂಗಡಿಗಳು ಭಸ್ಮ, ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 1:41 IST
Last Updated 9 ಜನವರಿ 2026, 1:41 IST
<div class="paragraphs"><p>ಸಿಂಧನೂರಲ್ಲಿ ಬೆಂಕಿ ಅವಘಡ</p></div>

ಸಿಂಧನೂರಲ್ಲಿ ಬೆಂಕಿ ಅವಘಡ

   

ಸಿಂಧನೂರು: ರಾಯಚೂರು ಗಂಗಾವತಿ ಮುಖ್ಯ ರಸ್ತೆಯಲ್ಲಿರುವ ಇರುವ ಅಂಗಡಿಗಳಿಗೆ ಹತ್ತಿಕೊಂಡ ಆಕಸ್ಮಿಕ ಬೆಂಕಿಯಿಂದ ಅಪಾರ ನಷ್ಟವಾಗಿದೆ.

ಈ ಅವಘಡದಿಂದ ನಾಲ್ಕು ಅಂಗಡಿಗಳು ಸುಟ್ಟು ಕರಕಲಾಗಿವೆ.

ADVERTISEMENT

ಗುರುವಾರ ಮಧ್ಯರಾತ್ರಿ ಕನಕದಾಸ ವೃತ್ತದ ಬಳಿ ಇರುವ ಆರನೇ ವಾರ್ಡಿನ ದೆಹಲಿ ಬಜಾರ್‌ಗೆ ಹೊತ್ತಿಕೊಂಡ ಬೆಂಕಿ ತನ್ನ ಕೆನ್ನಾಲಿಗೆಯಿಂದ ಪಕ್ಕದಲ್ಲಿರುವ ಮೊಬೈಲ್ ಅಂಗಡಿ, ಬಟ್ಟೆ ಅಂಗಡಿ ಚಿಕನ್ ಸೆಂಟರ್ ಗಳನ್ನು ಸುಟ್ಟು ಭಸ್ಮ ಮಾಡಿದ್ದು, ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಿದ್ದರಿಂದ ಇನ್ನೂ ಆಗಬಹುದಾದ ಭಾರಿ ಅನಾಹುತ ತಪ್ಪಿದೆ.

ಬೆಳಗಿನ ಜಾವವರೆಗೂ ಬೆಂಕಿ ನಂದಿಸುವ ಕಾರ್ಯ ನಡೆದಿತ್ತು. ಅಗ್ನಿಯ ಅವಘಡದಿಂದ ಉಂಟಾಗಿರುವ ನಷ್ಟದ ಪ್ರಮಾಣ ಖಚಿತವಾಗಿಲ್ಲ.

ಸಿಂಧನೂರಲ್ಲಿ ಬೆಂಕಿ ಅವಘಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.