ADVERTISEMENT

ನಿರಂತರ ಮಳೆ: 2 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಮಸ್ಕಿ ಜಲಾಶಯಕ್ಕೆ ಮತ್ತೆ ಹೆಚ್ಚಿದ ಒಳ ಹರಿವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 17:05 IST
Last Updated 13 ಅಕ್ಟೋಬರ್ 2020, 17:05 IST
ಮಸ್ಕಿಯ ಜಲಾಶಯದಿಂದ ಮಂಗಳವಾರ ಎರಡು ಸಾವಿರ ಕ್ಯುಸೆಕ್ ನೀರು ಬಿಟ್ಟಿರುವುದು (ಎಡಚಿತ್ರ) ಮಸ್ಕಿ ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋದ ಚನ್ನಬಸವನ ಶೋಧ ಕಾರ್ಯ ಬುಧವಾರವೂ ಮುಂದುವರೆದಿದೆ
ಮಸ್ಕಿಯ ಜಲಾಶಯದಿಂದ ಮಂಗಳವಾರ ಎರಡು ಸಾವಿರ ಕ್ಯುಸೆಕ್ ನೀರು ಬಿಟ್ಟಿರುವುದು (ಎಡಚಿತ್ರ) ಮಸ್ಕಿ ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋದ ಚನ್ನಬಸವನ ಶೋಧ ಕಾರ್ಯ ಬುಧವಾರವೂ ಮುಂದುವರೆದಿದೆ   

ಮಸ್ಕಿ: ತಾಲ್ಲೂಕಿನ ಮಾರಲದಿನ್ನಿ ಬಳಿ ಇರುವ ಮಸ್ಕಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿದ್ದು, ಮಂಗಳವಾರ ರಾತ್ರಿಯಿಂದಲೇ ಜಲಾಶಯದಿಂದ ಮಸ್ಕಿ ಹಳ್ಳಕ್ಕೆ ಎರಡು ಸಾವಿರ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ.

ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಮಸ್ಕಿ ಹಳ್ಳದಲ್ಲಿ ಮತ್ತೆ ಪ್ರವಾಹದ ಭೀತಿ ನಿರ್ಮಾಣವಾಗಿದೆ. ತಾಲ್ಲೂಕಿನ ಚಿಕ್ಕಕಡಬೂರು ಹಾಗೂ ಹಿರೇಕಡಬೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳಗಡೆಯಾಗಿದೆ.

ಎರಡು ಗ್ರಾಮಗಳಸಂಪರ್ಕ ಕಡಿತಗೊಂಡಿದೆ. ಬಳಗಾನೂರು ಪಟ್ಟಣದಲ್ಲಿ ಹಾದು ಹೋಗಿರುವ ಹಳ್ಳ ಅಪಾಯದ ಮಟ್ಟದಲ್ಲಿ ಹರಿಯತೊಡಗಿದೆ.

ADVERTISEMENT

ಮಸ್ಕಿ ಜಲಾಶಯದ ಮೇಲ್ಭಾಗದಲ್ಲಿ ಅಂದರೆ, ಗಜೇಂದ್ರಗಡ, ಕುಷ್ಟಗಿ ಮುಂತಾದ ಕಡೆ ಸುರಿಯುತ್ತಿರುವ ಮಳೆಯಿಂದ ಮಸ್ಕಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು ಹೆಚ್ಚಿನ ನೀರನ್ನು ಹಳ್ಳಕ್ಕೆ ಬಿಡುತ್ತಿದ್ದರಿಂದ ಹಳ್ಳದ ಪಾತ್ರದ ಜನರು ಹಳ್ಳದಲ್ಲಿ ಇಳಿಯಬಾರದು ಹಾಗೂ ಜಾನುವಾರುಗಳನ್ನು ಹಳ್ಳಕ್ಕೆ ತರಬಾರದು ಎಂದು ಮಸ್ಕಿ ಜಲಾಶಯದ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ದಾವುದ್, ಹಳದ ದಡದ ಗ್ರಾಮಗಳ ಗ್ರಾಮಸ್ಥರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.