ADVERTISEMENT

ಮೂರ್ಛೆ ಹೋಗಿದ್ದ ಹಾವಿಗೆ ಆಮ್ಲಜನಕ ಪೂರೈಸಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 13:45 IST
Last Updated 15 ನವೆಂಬರ್ 2023, 13:45 IST
ನಾಗರಹಾವಿಗೆ ಆಮ್ಲಜನಕ ನೀಡಲಾಯಿತು
ನಾಗರಹಾವಿಗೆ ಆಮ್ಲಜನಕ ನೀಡಲಾಯಿತು   

ಹಟ್ಟಿ ಚಿನ್ನದ ಗಣಿ: ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಅಪರೂಪದ ಘಟನೆ ನಡೆದಿದೆ.

ಪಟ್ಟಣದ ಹೊರವಲಯದ ಪಾಮನಕಲ್ಲೂರು ಕ್ರಾಸ್ ಬಳಿ ಇನ್ನೊವಾ ವಾಹನದಲ್ಲಿ ನಾಗರಹಾವು ಪತ್ತೆಯಾಗಿತ್ತು. ಕಾರಿನಿಂದ ಅದನ್ನು ಹೊರತೆಗೆಯಲು ಸಾಕಷ್ಟು ಪ್ರಯತ್ನ ಮಾಡಿದರೂ ಆಗಲಿಲ್ಲ.

ನಂತರ ಹಟ್ಟಿ ಚಿನ್ನದಗಣಿ ಕಂಪನಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಅರವಳಿಕೆ ತಜ್ಞ ಡಾ. ರವೀಂದ್ರನಾಥ ಅವರು ಹಾವು ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಹಾವನ್ನು ಹೊರಬರುವಂತೆ ಮಾಡಲು ಫಿನಾಯಿಲ್ ಸಿಂಪಡಣೆ ಮಾಡಲಾಯಿತು. ಇದರ ವಾಸನೆಗೆ ನಾಗರಹಾವು ಮೂರ್ಛೆ ಹೋಗಿತ್ತು. ಕೂಡಲೇ ವೈದ್ಯಾಧಿಕಾರಿ ಹಾಗೂ ಲಿಂಗಸುಗೂರು ಉರಗತಜ್ಞ ಖಾಲಿದ್ ಚಾವೂಸ್ ಅವರು ಆಸ್ಪತ್ರೆಗೆ ತಂದು ಕೃತಕ ಆಮ್ಲಜನಕ ಪೂರೈಸಿದ್ದಾರೆ.

ADVERTISEMENT

ಇದರಿಂದ ಜ್ಞಾನ ತಪ್ಪಿ ಹೋಗಿದ್ದ ನಾಗಹಾವಿಗೆ ಮರು ಜೀವ ಬಂದಂತಾಗಿದೆ. ಬಳಿಕ ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.