ADVERTISEMENT

ರಿಮ್ಸ್: ನಿಯಮ ಉಲ್ಲಂಘಿಸಿ ಪ್ರಭಾರಿ ನೇಮಕ- ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 13:40 IST
Last Updated 22 ಏಪ್ರಿಲ್ 2025, 13:40 IST
ರಾಜು ಪಟ್ಟಿ
ರಾಜು ಪಟ್ಟಿ   

ರಾಯಚೂರು: ‘ಇಲ್ಲಿನ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (ರಿಮ್ಸ್)ಯಲ್ಲಿ ಟ್ಯೂಟರ್ ಹುದ್ದೆ ಹಾಗೂ ಆಡಿಯೊಮೆಟ್ರಿ ತಂತ್ರಜ್ಞರ ಹುದ್ದೆ ಪ್ರಭಾರಿಗೆ ವಹಿಸಿಕೊಡಲಾಗಿದೆ. ಇದರಿಂದ ಬಡ ನಿರುದ್ಯೋಗಿಗಳನ್ನು ಕಡೆಗಣಿಸಲಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ರಾಜು ಪಟ್ಟಿ ಆರೋಪಿಸಿದರು.

‘ರಿಮ್ಸ್ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಆಡಳಿತ ಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಇದನ್ನು ಗಾಳಿಗೆ ತೂರಿ ಟ್ಯೂಟರ್ ಹುದ್ದೆ, ಆಡಿಯೊಮೆಟ್ರಿ ತಂತ್ರಜ್ಞರ ಹುದ್ದೆ ಸೇರಿ ಅನೇಕ ಹುದ್ದೆ ಪ್ರಭಾರಿಗೆ ವಹಿಸಿಸಲಾಗಿದೆ. ಈ ಮೂಲಕ ರಿಮ್ಸ್ ನಿರ್ದೇಶಕರೇ ನಿಯಮ ಉಲ್ಲಂಘನೆ ಮಾಡಿದ್ದಾರೆ’ ಎಂದು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.

‘ರಿಮ್ಸ್ ನಿರ್ದೇಶಕರು ಯಾವುದೇ ಭಯ, ಆತಂಕವಿಲ್ಲದೆ ನಿರಂತರವಾಗಿ ಆಕ್ರಮ ಎಸಗುತ್ತಿದ್ದಾರೆ. ನೇಮಕಾತಿ ನಿಯಮ ಪಾಲಿಸದೇ ಆಡಿಯೊಮೆಟ್ರಿ ತಂತ್ರಜ್ಞರ ಒಂದೇ ಹುದ್ದೆಗೆ ಇಬ್ಬರನ್ನು ನೇಮಿಸಿಕೊಂಡಿರುವುದು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ರಿಮ್ಸ್ ಆಸ್ಪತ್ರೆ ಅಧಿಕಾರಿಗಳು ಜಿಲ್ಲೆಯ ನಿರುದ್ಯೋಗ ಯುವಕರಿಗೆ ವಂಚನೆ ಮಾಡುವ ಮೂಲಕ ಪ್ರಭಾವಿಗಳಿಗೆ ಮಣೆ ಹಾಕುತ್ತಿದ್ದಾರೆ’ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ನರಸಿಂಹಲು, ವೈ.ನರಸಪ್ಪ, ಎಂ.ಆರ್. ಬೇರಿ, ಮಹೇಶ ಕುಮಾರ, ವಕೀಲ ಚಂದ್ರಶೇಖರ, ಭಾಸ್ಕರ್, ವಕೀಲ ಮಾರೆಪ್ಪ, ಪ್ರಸಾದ, ಪರಶುರಾಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.