ಹಟ್ಟಿಚಿನ್ನದಗಣಿ: ಸಮೀಪದ ರೋಡಲಬಂಡಾ(ತ) ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಅಂಬಮ್ಮ ಲಕ್ಷ್ಮಣ ಯಲಗಟ್ಟಾ, ಉಪಾಧ್ಯಕ್ಷೆಯಾಗಿ ಈರಮ್ಮ ಆರ್ಯಪ್ಪ ಯಲಗಟ್ಟಾ ಅವಿರೋಧವಾಗಿ ಶನಿವಾರ ಆಯ್ಕೆಯಾದರು.
ಆರು ತಿಂಗಳು ತಡವಾಗಿ ಈ ಪಂಚಾಯಿತಿಗೆ ಚುನಾವಣೆ ನಡೆದಿದ್ದರಿಂದ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷೆ ಸ್ಥಾನಕ್ಕೆ ಅಂಬಮ್ಮ ಲಕ್ಷ್ಮಣ, ಪರಿಶಿಷ್ಟ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಈರಮ್ಮ ಆರ್ಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಪ್ರತಿಸ್ಪರ್ಧಿಗಳಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ತಾ.ಪಂ ಇಒ ಅಮರೇಶ ಯಾದವ್ ಅವಿರೋಧವಾಗಿ ಆಯ್ಕೆ ಘೋಷಿಸಿದರು.
ಒಟ್ಟು 19 ಸದಸ್ಯರಲ್ಲಿ 18 ಜನ ಸಭೆಗೆ ಹಾಜರಾಗಿದ್ದರು. ತಾ.ಪಂ. ವ್ಯವಸ್ಥಾಪಕ ಮಲ್ಲಿಕಾರ್ಜುನ, ಪಿಡಿಒ ಸುರೇಶ, ಕಾರ್ಯದರ್ಶಿ ಶಿವರೆಡ್ಡಿ, ಅಕೌಟೆಂಟ್ ರಾಮಪ್ಪ, ಬಿಲ್ ಕಲೆಕ್ಟರ್ ಭೀಮರಾಯ ಮುಷ್ಟೂರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.