ADVERTISEMENT

ರಾಯಚೂರು: ಆರ್‌ಎಸ್‌ಎಸ್‌ಗೆ ನೂರರ ಸಂಭ್ರಮ

ಗಮನ ಸೆಳೆದ ಆಕರ್ಷಕ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 6:52 IST
Last Updated 13 ಅಕ್ಟೋಬರ್ 2025, 6:52 IST
<div class="paragraphs"><p>ರಾಯಚೂರು ತಾಲ್ಲೂಕಿನ ಶಕ್ತಿನಗರದಲ್ಲಿ ರಾಷ್ತ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರು ಪಥ ಸಂಚಲನ ನಡೆಸಿದರು</p></div>

ರಾಯಚೂರು ತಾಲ್ಲೂಕಿನ ಶಕ್ತಿನಗರದಲ್ಲಿ ರಾಷ್ತ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರು ಪಥ ಸಂಚಲನ ನಡೆಸಿದರು

   

ರಾಯಚೂರು: ಜಿಲ್ಲೆಯ ಮಾನ್ವಿ, ಲಿಂಗಸುಗೂರು ಹಾಗೂ ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾಷ್ತ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನ ಶಾಂತಿಯುತವಾಗಿ ನೆರವೇರಿತು.

ಮಾನ್ವಿಯಲ್ಲಿ ಡಿ.ಎಸ್.ಪಿ, ಇಬ್ಬರು ಸಿ.ಪಿ.ಐ, ಐವರು ಸಬ್‌ ಇನ್ಸ್‌ಪೆಕ್ಟರ್‌ಗಳು, 75 ಮಂದಿ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ 15 ಮಂದಿ ಹೋಮ್‌ಗಾರ್ಡ್‌ಗಳು ಕರ್ತವ್ಯ ನಿರ್ವಹಿಸಿದರು. ಜೊತೆಗೆ ಒಂದು ಡಿ.ಎ.ಆರ್. ತುಕಡಿಯನ್ನೂ ನಿಯೋಜಿಸಲಾಗಿತ್ತು. ಲಿಂಗಸುಗೂರಿನಲ್ಲಿ ಒಬ್ಬ ಅಡಿಷನಲ್ ಎಸ್‌ಪಿ, ಒಬ್ಬ ಡಿ.ಎಸ್.ಪಿ, ನಾಲ್ವರು ಸಿ.ಪಿ.ಐಗಳು, ಆರು ಸಬ್‌ ಇನ್ಸ್‌ಪೆಕ್ಟರ್‌ಗಳು, 45 ಮಂದಿ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ 15 ಮಂದಿ ಹೋಮ್‌ಗಾರ್ಡ್‌ಗಳು ಕಾರ್ಯನಿರ್ವಹಿಸಿದರು. ಎರಡು ಡಿ.ಎ.ಆರ್. ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು. ಶಕ್ತಿನಗರದಲ್ಲಿ ಒಬ್ಬ ಪಿ.ಎಸ್‌.ಐ ಮತ್ತು 15 ಮಂದಿ ಪೊಲೀಸ್ ಕಾನ್‌ಸ್ಟೆಬಲ್ ಬಂದೋಬಸ್ತ್‌ನಲ್ಲಿ ತೊಡಗಿದ್ದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು. ‘ಆರ್‌ಎಸ್‌ಎಸ್ ಪಥಸಂಚಲನವು ಶಾಂತಿಯುತವಾಗಿ ನಡೆದಿದೆ. ಎಲ್ಲೆಡೆ ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.