
ಮಾನ್ವಿ: ‘ಹಾಲುಮತ ಸಮುದಾಯದ ಜತೆಗೆ ಎಲ್ಲ ಶೋಷಿತ ಸಮುದಾಯಗಳ ಏಳಿಗೆಗೆ ಸಿದ್ಧರಾಮನಂದಪುರಿ ಸ್ವಾಮೀಜಿ ಅವರು ನಾಡಿನ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಚಿರಸ್ಮರಣೀಯ’ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ ವಕೀಲ ಹೇಳಿದರು.
ಪಟ್ಟಣದ ಕನಕ ಪ್ರಸಾದ ನಿಲಯದಲ್ಲಿ ಶುಕ್ರವಾರ ತಾಲ್ಲೂಕು ಕುರುಬರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖಂಡರಾದ ಶ್ರೀಶೈಲಗೌಡ, ಈರಣ್ಣ ಮರ್ಲಟ್ಟಿ, ಅಜೇಯಕುಮಾರ, ದುರುಗಪ್ಪ ತಡಕಲ್, ಮಹಾಂತೇಶ ಓಲೇಕಾರ ಮತ್ತಿತರರು ಸ್ವಾಮೀಜಿ ಅವರ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಆರ್.ಸತ್ಯನಾರಾಯಣ ಮುಷ್ಟೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೀರಪ್ಪ ಪೂಜಾರಿ ಹಳ್ಳಿಹೊಸೂರು ಹಾಗೂ ಬೀರಪ್ಪ ತಾತ ಮುಷ್ಟೂರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷ ಕೆ.ಬಸವಂತಪ್ಪ, ತಾಲ್ಲೂಕು ಕನಕ ಗುರುಪೀಠದ ಅಧ್ಯಕ್ಷ ಮಲ್ಲಯ್ಯ ನಸಲಾಪುರ, ಮುಖಂಡರಾದ ಯಂಕನಗೌಡ ಬೊಮ್ಮನಾಳ, ಡಿ.ವೆಂಕಟೇಶ, ವನಕೇರಪ್ಪ ಮಾನ್ವಿ, ಚನ್ನಬಸವ ಕೊಡ್ಲಿ, ಶಿವಶಂಕರಗೌಡ ಬಾಗಲವಾಡ, ರಾಹುಲ ಕಲಂಗೇರಾ, ಎಂ.ಶಿವಕುಮಾರ, ವಿಜಯಕುಮಾರ ಸಾಹುಕಾರ ಉದ್ಬಾಳ, ದೇವೇಗೌಡ ಉದ್ಬಾಳ, ನಿವೃತ್ತ ಎಎಸ್ಐ ವೆಂಕನಗೌಡ ಬೊಮ್ಮನಾಳ, ಹನುಮಂತ ಪಾಟೀಲ ಡೊಣಮರಡಿ, ಭೀಮನಗೌಡ ಮುಷ್ಟೂರು, ಬಸವರಾಜ ವಡ್ಲೂರ, ಬಸವರಾಜ ಕನ್ನಾರಿ, ಮಾಳಿಂಗರಾಯ ಪಾತಾಪುರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.