
ಸಿಂಧನೂರು: ‘ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ವಿಜಯೋತ್ಸವದೊಂದಿಗೆ ಅಂಬೇಡ್ಕರ್, ಮಾಕ್ರ್ಸ್ ಚಿಂತನೆಗಳನ್ನು ಕಟ್ಟುತ್ತ ಮನುವಾದಿಗಳನ್ನು ಸೋಲಿಸೋಣ’ ಎಂದು ಆಚರಣೆ ಸಮಿತಿ ಸಂಚಾಲಕ ಎಂ.ಗಂಗಾಧರ ಹೇಳಿದರು.
ಗುರುವಾರ ನಗರದ ಪಿಡಬ್ಯ್ಲೂಡಿ ಕ್ಯಾಂಪ್‌ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಬಳಿ 208ನೇ ಭೀಮಾ ಕೊರೆಗಾಂವ್ ಕದನ ವಿಜಯೋತ್ಸವದ ಬೃಹತ್ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಹಿರಿಯ ಹೋರಾಟಗಾರ ಡಿ.ಎಚ್.ಪೂಜಾರ ಮಾತನಾಡಿ ‘ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ಪರ್ಯಾಯ ಪಸಂಚಲನ ಅವಶ್ಯ. ಜಾತಿ, ಮತ ಬಿಡಿ; ಮಾನವತೆಗೆ ಜೀವ ಕೊಡಿ ಎಂಬ ಚಳವಳಿ ತೀವ್ರಗೊಳ್ಳಬೇಕು’ ಎಂದರು.
ಚಲುವಾದಿ ಮಹಾಸಭಾ ಅಧ್ಯಕ್ಷ ರಾಮಣ್ಣ ಗೋನ್ವಾರ, ಮುಖಂಡರಾದ ಮರಿಯಪ್ಪ, ಅಮರೇಶ ಗಿರಿಜಾಲಿ, ಪ್ರವೀಣ ಧುಮತಿ, ನಾಗವೇಣಿ ಪಾಟೀಲ, ಬಸವರಾಜ ಬಾದರ್ಲಿ, ಶಂಕರ ಗುರಿಕಾರ, ಮರಿಲಿಂಗಪ್ಪ, ಮುತ್ತು ಸಾಗರ, ಅಂಬ್ರುಸ್‍ಕೊಡ್ಲಿ, ನಿರುಪಾದಿ ಸಾಸಲಮರಿ, ಹೊನ್ನೂರು ಕಟ್ಟಿಮನಿ, ಬಸವರಾಜ ಬಾಗಲವಾಡ, ನಾರಾಯಣ ಬೆಳಗುರ್ಕಿ, ಮೌನೇಶ್ ಜಾಲವಾಡಗಿ ಮಾತನಾಡಿದರು.
ಇದಕ್ಕೂ ಮುನ್ನ ತಾಲ್ಲೂಕು ಪಂಚಾಯತ್ ಆವರಣದಲ್ಲಿನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಡಾ.ಕೆ.ಶಿವರಾಜ ಪಥ ಸಂಚಲನವನ್ನು ಉದ್ಘಾಟಿಸಿ ಚಾಲನೆ ನೀಡಿದರು.
ಪಥ ಸಂಚಲನ: ತಾಲ್ಲೂಕು ಪಂಚಾಯಿತಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನೂರಾರು ಕಾರ್ಯಕರ್ತರು ಪಿಡಬ್ಲ್ಯೂಡಿ ಕ್ಯಾಂಪ್‌ನ ಅಂಬೇಡ್ಕರ್ ವೃತ್ತದ ವರೆಗೆ ವಿಜಯ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಬಸವರಾಜ ಎಕ್ಕಿ, ಹೆಚ್.ಆರ್.ಹೊಸಮನಿ, ಮುದಿಯಪ್ಪ ಸೇರಿದಂತೆ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆರ್‌ಸಿಎಫ್ ಕಲಾ ತಂಡದಿಂದ ಭೀಮಾ ಕೊರೆಗಾಂವ ಹಾಗೂ ಅಂಬೇಡ್ಕರ್ ಕುರಿತು ಕ್ರಾಂತಿಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಹನುಮಂತ ಗೋಮರ್ಸಿ, ಹಾರೂನ್‍ಪಾಷಾ ಜಾಗಿರದಾರ, ನರಸಪ್ಪ ಕಟ್ಟಿಮನಿ, ಅಯ್ಯಪ್ಪ ವಕೀಲ, ಮೌಲಪ್ಪ ವಕೀಲ, ಹನುಮಂತಪ್ಪ ಗೋಮರ್ಸಿ, ಚನ್ನಬಸವರಾಜ ಕುನ್ನಟಗಿ, ಹುಲುಗಪ್ಪ ಮಲ್ಲಾಪುರ, ಹುಸೇನಪ್ಪ ಗೊರೇಬಾಳ, ಕರಿಯಪ್ಪ ಮಾಡಸಿರವಾರ, ಹಂಸರಾಜ ಮಾಡಸಿರವಾರ, ಚಂದ್ರು ಸಿದ್ರಾಮಪುರ, ಶರಣಬಸವ ಮಲ್ಲಾಪುರ, ದುರುಗಪ್ಪ ಮಲ್ಲಾಪುರ, ವಿರೂಪಣ್ಣ ಬೂದಿಹಾಳ, ವೀರೇಶ್ ಹಂಚಿನಾಳ, ಮಾರೆಪ್ಪ ರಾಮತ್ನಾಳ, ಶರಣಪ್ಪ ಸೋಮನಾಳ, ಶರಣಬಸವ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.