ADVERTISEMENT

ಸಿಂಧನೂರು: ಲಕ್ಷ್ಮಿ ಬಂಡೆ ರಂಗನಾಥ ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 3:08 IST
Last Updated 2 ಫೆಬ್ರುವರಿ 2026, 3:08 IST
ಸಿಂಧನೂರು ತಾಲ್ಲೂಕಿನ ರೌಡಕುಂದ ಗ್ರಾಮದ ಲಕ್ಷ್ಮಿ ಬಂಡೆ ರಂಗನಾಥ ದೇವಸ್ಥಾನದ ಮಹಾ ರಥೋತ್ಸವವು ಭಾನುವಾರ ಅದ್ದೂರಿಯಾಗಿ ಜರುಗಿತು
ಸಿಂಧನೂರು ತಾಲ್ಲೂಕಿನ ರೌಡಕುಂದ ಗ್ರಾಮದ ಲಕ್ಷ್ಮಿ ಬಂಡೆ ರಂಗನಾಥ ದೇವಸ್ಥಾನದ ಮಹಾ ರಥೋತ್ಸವವು ಭಾನುವಾರ ಅದ್ದೂರಿಯಾಗಿ ಜರುಗಿತು   

ಸಿಂಧನೂರು: ತಾಲ್ಲೂಕಿನ ರೌಡಕುಂದ ಗ್ರಾಮದ ಲಕ್ಷ್ಮಿ ಬಂಡೆ ರಂಗನಾಥ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವವು ಭಾನುವಾರ ಅದ್ದೂರಿಯಾಗಿ ಜರುಗಿತು.

ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಯಿತು.

ಸತ್ಯನಾರಾಯಣ ಪೂಜೆ, ಕಲ್ಯಾಣೋತ್ಸವ, ಉಚ್ಚಾಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಸಾವಿರಾರು ಭಕ್ತರ ಮಧ್ಯೆ ರಥೋತ್ಸವವು ಸಡಗರ ಸಂಭ್ರಮದಿಂದ ನಡೆಯಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ADVERTISEMENT

ನಂತರ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಥೋತ್ಸವದಲ್ಲಿ ರೌಡಕುಂದ, ಸಾಸಲಮರಿ, ಸೋಮಲಾಪುರ, ಮಲ್ಕಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಲಕ್ಷ್ಮಿ ಬಂಡೆ ರಂಗನಾಥ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರರಾವ್ ಕುಲಕರ್ಣಿ, ಬಿದರಳ್ಳಿ ಹನುಮೇಶ ಆಚಾರ್, ವೆಂಕಟರಾವ್ ವಟಗಲ್, ಅರುಣ್ ಕುಮಾರ್ ಕುಲಕರ್ಣಿ ಸಿರುಗುಪ್ಪ, ಸುಧಾಕರ್ ರಾವ್ ಕುಲಕರ್ಣಿ ಬಳ್ಳಾರಿ, ಕರಿಯಪ್ಪ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.