
ಸಿರವಾ: ‘ಮದ್ಯಪಾನ ನಮ್ಮ ದೇಹ ನಾಶ ಮಾಡುವುದರ ಜೊತೆಗೆ ಕುಟುಂಬದ ಅವನತಿಗೆ ಕಾರಣವಾಗುತ್ತದೆ. ಮದ್ಯಪಾನ ತ್ಯಜಿಸಿ ಸಮೃದ್ಧಿ ಜೀವನದೊಂದಿಗೆ ಕುಟುಂಬವನ್ನು ಮುನ್ನಡೆಸಬೇಕು’ ಎಂದು ರೈತ ಮುಖಂಡ ಜೆ.ಶರಣಪ್ಪಗೌಡ ಹೇಳಿದರು.
ಸಮೀಪದ ಜಾಲಾಪುರ ಕ್ಯಾಂಪ್‌ನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರಂಭವಾದ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಸಮಾಜದ ಒಳಿತು ಬಯಸುವ ಸದುದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಮದ್ಯವರ್ಜನ ಶಿಬಿರ ಹಮ್ಮಿಕೊಂಡಿದೆ. ಇದರಿಂದ ನೂರಾರು ಕುಟುಂಬಗಳ ರಕ್ಷಣೆ ಆಗಲಿದೆ. ಇದು ನಮ್ಮ ಭಾಗಕ್ಕೆ ಅವಶ್ಯಕವಾಗಿತ್ತು. ಇದನ್ನು ಸದ್ಬಳಕೆ ಮಾಡಿಕೊಂಡು ಮದ್ಯ ವ್ಯಸನದಿಂದ ಮುಕ್ತರಾಗಿ ಮುಂದೆ ಸಮಾಜದಲ್ಲಿ ಉತ್ತಮ ಜೀವನ ನಡೆಸಿ’ ಎಂದರು.
ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ ಹಾಗೂ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗೇಶ,
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ್ ಮಾತನಾಡಿದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬ್ರಿಜೇಶ ಪಾಟೀಲ, ಪ.ಪಂ ಅಧ್ಯಕ್ಷ ವೈ.ಭೂಪನಗೌಡ, ತಾಲ್ಲೂಕು ಯೋಜನಾಧಿಕಾರಿ ಬಿ.ಚಂದ್ರಹಾಸ, ಮುಖಂಡರಾದ ಎನ್.ಉದಯಕುಮಾರ, ಅರಿಕೇರಿ ಶಿವಶರಣ, ಎಂ.ಶ್ರೀನಿವಾಸ, ಜಿ.ವೀರೇಶ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಬಸವಲಿಂಗಪ್ಪ ಅರಿಕೇರಿ, ಅಯ್ಯನಗೌಡ ಏರಡ್ಡಿ, ಜ್ಞಾನ ಮಿತ್ರ, ಎಂ.ಅಮರೇಶ ಮಸ್ಕಿ, ವೆಂಕಟೇಶ ಬಾಗಲವಾಡ, ಅಮರೇಶ ದಿನ್ನಿ ಕವಿತಾಳ ಸೇರಿದಂತೆ ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.