ADVERTISEMENT

ಸಿಂಧನೂರು | ಕಳ್ಳನ ಬಂಧನ: 15 ಮೊಬೈಲ್, 2 ಬೈಕ್ ವಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 14:56 IST
Last Updated 23 ಏಪ್ರಿಲ್ 2024, 14:56 IST

ಸಿಂಧನೂರು: ಶಹರ ಠಾಣೆ ಪೊಲೀಸರು ಕಳ್ಳನೊಬ್ಬನನ್ನು ಬಂಧಿಸಿ, ಆತನಿಂದ 15 ಮೊಬೈಲ್ ಹಾಗೂ 2 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಕಳ್ಳತನ ಪ್ರಕರಣಗಳು ವರದಿ ಆಗುತ್ತಿದ್ದರಿಂದ ಕಳ್ಳನನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಡಿವೈಎಸ್‍ಪಿ ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್‌ಸ್ಪೆಕ್ಟರ್ ಸುಧೀರಕುಮಾರ ಎಂ.ಬೆಂಕಿ, ಸಬ್‍ ಇನ್‌ಸ್ಪೆಕ್ಟರ್‌ಗಳಾ ಶ್ರೀನಿವಾಸಲು, ವಲಿಬಾಷಾ ನೇತೃತ್ವದಲ್ಲಿ ಸಿಬ್ಬಂದಿ ಸೋಮನಗೌಡ, ಶರಣಪ್ಪ ರೆಡ್ಡಿ, ಸಂಗನಗೌಡ, ಆದಯ್ಯ, ವಿಜಯಕುಮಾರ, ಸಿದ್ದಪ್ಪ ಅವರನ್ನೊಳಗೊಂಡು ವಿಶೇಷ ತಂಡ ರಚಿಸಲಾಗಿತ್ತು.

ಈ ತಂಡ ಮೊಬೈಲ್ ಮತ್ತು ಬೈಕ್‍ ಕಳ್ಳತನ ಮಾಡುವ ಪರಶುರಾಮ ಸಿಯತಲಾಬ್ ಎಂಬ ಆರೋಪಿಯನ್ನು ಮಂಗಳವಾರ ಬಂಧಿಸಿದೆ.

ADVERTISEMENT

ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾದ ಗುನ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮೊಬೈಲ್ ಮತ್ತು 2 ಬೈಕ್‍ಗಳು ಸೇರಿ ಒಟ್ಟು ₹3,07,000 ಹಣ ಜಪ್ತಿ ಮಾಡಿಕೊಂಡಿದ್ದಾರೆ. ಕಳ್ಳನ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.