ADVERTISEMENT

ಕಾರುಗಳ ಮಧ್ಯೆ ಡಿಕ್ಕಿ: ಮೂವರು ವಿದ್ಯಾರ್ಥಿಗಳು ಸಾವು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 7:08 IST
Last Updated 11 ನವೆಂಬರ್ 2020, 7:08 IST
ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು
ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು   

ರಾಯಚೂರು: ತಾಲ್ಲೂಕಿನ ಮಂಜರ್ಲಾ ಕ್ರಾಸ್ ಸಮೀಪ ಬುಧವಾರ ಬೆಳಗಿನ ಜಾವ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಎಂಬಿಬಿಎಸ್ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ಬಸವರಾಜ, ಗಣೇಶ ಹಾಗೂ ಅಭಿಷೇಕ ಮೃತಪಟ್ಟಿದ್ದಾರೆ. ಸಿದ್ದಾರ್ಥ ಮತ್ತು ಭೀಮರೆಡ್ಡಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಸಿಂಧನೂರಿನ ಬಸವರಾಜ (23) , ಬೆಂಗಳೂರಿನ ಗಣೇಶ(23) ಹಾಗೂ ಲಿಂಗಸುಗೂರು ತಾಲ್ಲೂಕು ಮುದಗಲ್ ನ ಅಭಿಷೇಕ(23) ಎಂಬುವವರು ಮೃತಪಟ್ಟಿದ್ದಾರೆ.

ADVERTISEMENT

ಒಂದು ಕಾರು ಯರಗೇರಾದಿಂದ ಬರುತ್ತಿತ್ತು ಹಾಗೂ ಇನ್ನೊಂದು ರಾಯಚೂರಿನಿಂದ ಯರಗೇರಾದತ್ತ ಸಂಚರಿಸುತ್ತಿತ್ತು.

ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.