ADVERTISEMENT

ರಾಯಚೂರು: ಗುಡುಗು, ಸಿಡಿಲಿಗೆ ಆತಂಕಪಟ್ಟ ಜನರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 14:07 IST
Last Updated 5 ಜುಲೈ 2021, 14:07 IST
ರಾಯಚೂರು ನಗರದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ಮಹಾವೀರಚೌಕ್‌ನಿಂದ ಬಂಗಿಕುಂಟಾ ಮಾರ್ಗವು ಕಾಲುವೆಯಾಗಿತ್ತು
ರಾಯಚೂರು ನಗರದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ಮಹಾವೀರಚೌಕ್‌ನಿಂದ ಬಂಗಿಕುಂಟಾ ಮಾರ್ಗವು ಕಾಲುವೆಯಾಗಿತ್ತು   

ರಾಯಚೂರು: ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸೋಮವಾರ ಬೆಳಿಗ್ಗೆ 11 ಗಂಟೆಗೆ ಗುಡುಗು, ಸಿಡಿಲಿನ ಅಬ್ಬರವನ್ನು ಕೇಳಿ ಆಂತಕಕ್ಕೊಳಗಾಗಿದ್ದರು.

ಸುಮಾರು ಅರ್ಧಗಂಟೆ ಅವಧಿಯಲ್ಲಿ ಕಿವಿ ಪರಧೆ ಹರಿಯುವಂತೆ ಸಿಡಿಲಿನ ಅಬ್ಬರವಿತ್ತು. ಬಾಗಿಲು, ಕಿಟಕಿ ಬಂದ್‌ ಮಾಡಿಕೊಂಡು ಜನರು ಮನೆಯೊಳಗೆ ಸೇರಿದರು. ನಿರೀಕ್ಷಿಯಂತೆ ಆನಂತರ ಕೊಳವೆಗಳಿಂದ ನೀರು ಹರಿಸಿದಂತೆ ಬಿರುಸಿನಿಂದ ಮಳೆ ಸುರಿಯಲಾರಂಭಿಸಿತು.

10 ನಿಮಿಷಗಳಲ್ಲಿ ರಸ್ತೆ, ಚರಂಡಿ ಹಾಗೂ ತಗ್ಗುಪ್ರದೇಶಗಳೆಲ್ಲವೂ ಜಲಾವೃತವಾಗಿದ್ದವು. ಮಹಾವೀರ ವೃತ್ತದಿಂದ ಬಂಗಿಕುಂಟಾ ರಸ್ತೆ ಮಾರ್ಗ, ಸಿಯಾತಾಲಾಬ್‌, ಗಂಜ್‌ ಸುತ್ತಮುತ್ತಲೂ ನೀರು ಸಂಗ್ರಹವಾಗಿತ್ತು. ವಾಹನಗಳು ಸಂಚರಿಸುವುದು ಸಂಕಷ್ಟಮಯವಾಗಿತ್ತು.

ADVERTISEMENT

ತಗ್ಗುಪ್ರದೇಶದ ರಸ್ತೆಗಳೆಲ್ಲವೂ ಕಾಲುವೆಗಳಾಗಿದ್ದವು. ಅರ್ಧಗಂಟೆ ಸುರಿದ ಮಳೆಯಿಂದ ರಸ್ತೆಯಲ್ಲಿದ್ದ ಘನತ್ಯಾಜ್ಯವೆಲ್ಲವೂ ಚರಂಡಿಗೆ ಸೇರಿಕೊಂಡಿತು. ಇದರಿಂದ ಕೆಲವು ಕಡೆಗಳಲ್ಲಿ ಚರಂಡಿಗಳು ಸ್ಥಗಿತಗೊಂಡು ಸಮಸ್ಯೆ ಸೃಷ್ಟಿಯಾಗಿತ್ತು.

ಜೇಗರಕಲ್‌, ಮರ್ಚೆಡ್‌, ಮಲ್ಲಾಪುರ, ಕಡಗಂದೊಡ್ಡಿ, ಚಂದ್ರಬಂಡಾದಲ್ಲಿ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.