
ಪ್ರಜಾವಾಣಿ ವಾರ್ತೆ
ಕವಿತಾಳ: ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದಲ್ಲಿ ಪುರಾಣ ಪ್ರವಚನ ಹಿನ್ನೆಲೆಯಲ್ಲಿ ಗುರುವಾರ ನಡೆದ ತೊಟ್ಟಿಲೋತ್ಸವದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಂಭ್ರಮದಿಂದ ಪಾಲ್ಗೊಂಡಿದ್ದರು.
ಸಾನ್ನಿಧ್ಯವಹಿಸಿದ್ದ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ‘ಮಠ ಸಂಪ್ರದಾಯದಂತೆ ತೊಟ್ಟೊಲೋತ್ಸವ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಯಶಸ್ಸಿಗೆ ಭಕ್ತರು ಅವಿರತ ಶ್ರಮಿಸುತ್ತಿದ್ದಾರೆ’ ಎಂದರು.
ಹರ್ಲಾಪುರದ ಸದಾನಂದ ಶಾಸ್ತ್ರಿ, ಮನೋಹರ ಹಿರೇಮಠ, ಪ್ರತಾಪ ಕುಷ್ಠಗಿ, ಅಮರಯ್ಯ ಹಿರೇಮಠ, ವೀರಭದ್ರಯ್ಯ, ಸೇರಿದಂತೆ, ಧೋತರಬಂಡಿ, ಬೆಳವಾಟ, ಬೆಳ್ಳಿಗನೂರು, ದಿದ್ದಗಿ, ತಡಕಲ್ ಹಾಗೂ ಸುತ್ತಲಿನ ಗ್ರಾಮಗಳು ಭಕ್ತರು ತೊಟ್ಟಿಲೋತ್ಸವದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.