ತುಂಗಭದ್ರ ನದಿ
ರಾಯಚೂರು: ಬೆಂಗಳೂರಿನಿಂದ ರಾಯರ ದರ್ಶನಕ್ಕೆ ಆಗಮಿಸಿದ ಭಕ್ತರು ಎಲೆಬಿಚ್ಚಾಲಿಯ ರಾಯರ ತಪೋ ಕಟ್ಟೆ ದರ್ಶನಕ್ಕೆ ಬಂದ ಸಂದರ್ಭದಲ್ಲಿ ಗುರುವಾರ ಸಂಜೆ ತುಂಗಭದ್ರ ನದಿಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಒಟ್ಟು 15 ಜನ ಭಕ್ತರು ಬೆಂಗಳೂರಿನಿಂದ ಆಗಮಿಸಿದ್ದರು. ರಾಯರ ದರ್ಶನದ ನಂತರ ಗಾಣದಾಳಕ್ಕೆ ತೆರಳಿ ಪಂಚಮುಖಿಯ ದರ್ಶನ ಪಡೆದು ನಂತರ, ರಾಯರ ತಪುಕಟ್ಟೆ ಎಂದೇ ಖ್ಯಾತಿ ಹೊಂದಿದ ಎಲೆ ಬಿಚ್ಚಾಲಿ ಗ್ರಾಮಕ್ಕೆ ಬಂದಿದ್ದರು. ಕೆಲವರು ನೀರಿಗಿಳಿದು ಈಜುತ್ತಿದ್ದರು. ಇಬ್ಬರೂ ಈಜುತ್ತಾ ನದಿಯ ಒಳಭಾಗಕ್ಕೆ ತೆರಳಿ ನದಿ ನೀರಿನ ಸೆಳವಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತರನ್ನು ಮುತ್ತುರಾಜ್ ಹಾಗೂ ಮದನ್ ಎಂದು ಗುರುತಿಸಲಾಗಿದೆ.
ಮೃತ ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಸಂಬಂದಿಕರು ಶವಗಳನ್ನು ಬೆಂಗಳೂರಿಗೆ ಒಯ್ದಿದ್ದಾರೆ. ಯಾಪಲದಿನ್ನಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.