ಟರ್ಕಿ ದೇಶದ ಸಜ್ಜೆ ಬೆಳೆಯ ಜೊತೆ ರೈತ ಪ್ರದೀಪ್ ಗೌಡ
ಹಟ್ಟಿಚಿನ್ನದಗಣಿ: ಸಮೀಪದ ಹೀರೆನಗನೂರು ಗ್ರಾಮದ ರೈತ ಪ್ರದೀಪಗೌಡ ಅವರು ಸುಮಾರು 4 ತಿಂಗಳ ಹಿಂದೆ ಟರ್ಕಿ ದೇಶದ ಸಜ್ಜೆ ಬೀಜಗಳನ್ನು ತಂದು ಬಿತ್ತನೆ ಮಾಡಿದ್ದು, ಈಗ ಹೆಚ್ಚಿನ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
‘ಜೂನ್ ತಿಂಗಳಲ್ಲಿ ಆನ್‌ಲೈನ್ ಮೂಲಕ ಟರ್ಕಿ ದೇಶದ ಹೊಸ ತಳಿಯ ಬೀಜಗಳನ್ನು ತರಿಸಿ ಕೊಟ್ಟಿಗೆ ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದಾರೆ. ಇದಕ್ಕೆ ಕಳೆನಾಶಕವೂ ಅಗತ್ಯವಿಲ್ಲ. ಈ ಸಜ್ಜೆ ಬುಡವು ಚಿಕ್ಕದಾಗಿದ್ದು, ತೆನೆಯು 3.5 ಅಡಿ ಎತ್ತರಕ್ಕೆ ಬೆಳೆದ ನಿಂತಿದೆ ಒಂದು ಎಕರೆ ಪ್ರದೇಶದಲ್ಲಿ 10 ರಿಂದ 15 ಕ್ವಿಂಟಲ್ ಇಳುವರಿ ಬರಲಿದೆ’ ಎನ್ನುತ್ತಾರೆ ರೈತ ಪ್ರದೀಪ್.
‘ಸುಮಾರು ನಾಲ್ಕು ತಿಂಗಳ ನಂತರ ಕಟಾವಿಗೆ ಬರುವ ಬೆಳೆ ಇದಾಗಿದ್ದು, ಸ್ಥಳೀಯ ಸಜ್ಜೆ ತಳಿಯಿಂದ ಸುಮಾರು 5ರಿಂದ 6 ಕ್ವಿಂಟಲ್ ಹೆಚ್ಚುವರಿ ಇಳುವರಿ ಬರುತ್ತದೆ. ಕಳೆನಾಶಕ ಹಾಗೂ ಈ ಇರ ಬೆಳೆಗಳನ್ನು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು ಸಜ್ಜೆಗೆ ಬೆಳೆಗೆ ಯಾವುದೆ ಕೀಟಬಾಧೆ ಬಾಧಿಸುವುದಿಲ್ಲ. ರೈತರಿಗೆ ಮಾಹಿತಿ ಕೊರತೆ ಇದ್ದು ಕೃಷಿ ಅಧಿಕಾರಿಗಳು ಕೃಷಿ ತಜ್ಞರು ರೈತರಿಗೆ ಸರಿಯಾದ ಮಾಹಿತಿ ಒದಗಿಸಿದರೆ ಯುವಕರು ಕೃಷಿ ಕಡೆ ಒಲವು ತೊರಬಹುದು’ ರೈತ ಪ್ರದೀಪ್ ಗೌಡ.
ಸಜ್ಜೆಯ ಬೆಳೆಯನ್ನು ನೋಡಿದ ವಿವಿಧ ಗ್ರಾಮಗಳ ರೈತರು ಜಮೀನಿಗೆ ಭೇಟಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಎಲ್ಲ ರೈತರು ಒಂದೆ ತರನಾದ ಬೆಳೆಗಳನ್ನು ಬೆಳೆಯುವ ಬದಲು ಹೊಸ ಹೊಸ,ತಂತ್ರಜ್ಞಾನ, ಹಾಗೂ ವಿವಿದ ತಳಿಯ ಬೆಳೆಗಳನ್ನು ಬೆಳೆಯವುದರಿಂದ ಭೂಮಿಯ ಫಲವತ್ತತೆ ಹೆಚ್ಚಳವಾಗಿ ಇಳುವರಿ ಕೂಡ ಹೆಚ್ಚಳವಾಗಲಿದೆ.
ವಿದ್ಯಾವಂತರು ಕೃಷಿ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕಾಗಿದೆ. ಕೃಷಿ ಇಲಾಖೆ ರೈತರಿಗೆ ಸಾವಯುವ ಕೃಷಿ ಬಗ್ಗೆ ಅರಿವು ಮೂಡಸಬೇಕಿದೆಪ್ರದೀಪಗೌಡ ಹೀರೆನಗನೂರು ರೈತ
ಟರ್ಕಿ ದೇಶದ ಸಜ್ಜೆ ತಳಿ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಇಂಥ ಹೊಸ ತಳಿಯ ವಿವಿದ ಬೆಳೆಗಳನ್ನು ಬೆಳೆದು ಈ ಭಾಗದ ರೈತರು ಅಭಿವೃದ್ಧಿ ಹೊಂದಬೇಕುಹನುಮಂತ ರಾಠೋಡ ಗುರುಗುಂಟಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.