ADVERTISEMENT

ಶಾವಂತಗೇರ, ಹೇಮನಾಳ ಪಂಚಾಯಿತಿ ಚುನಾವಣೆಗಾಗಿ ಮನವಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 13:15 IST
Last Updated 17 ಡಿಸೆಂಬರ್ 2020, 13:15 IST
ದೇವದುರ್ಗ ತಾಲ್ಲೂಕಿನ ಹೇಮನಾಳ ಮತ್ತು ಶಾವಂತಗೇರ ಗ್ರಾಮ‌ ಪಂಚಾಯಿತಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು
ದೇವದುರ್ಗ ತಾಲ್ಲೂಕಿನ ಹೇಮನಾಳ ಮತ್ತು ಶಾವಂತಗೇರ ಗ್ರಾಮ‌ ಪಂಚಾಯಿತಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು   

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೇಮನಾಳ ಮತ್ತು ಶಾವಂತಗೇರ ಗ್ರಾಮ‌ ಪಂಚಾಯಿತಿ ಚುನಾವಣೆ ನಡೆಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಐದು ವರ್ಷಗಳಿಂದ ಈ ಎರಡು ಪಂಚಾಯಿತಿಗಳಿಗೆ ಚುನಾವಣೆ ನಡೆಯದೇ ಅಭಿವೃದ್ಧಿ ಕಾರ್ಯಗಳು ಅಗುತ್ತಿಲ್ಲ. ಮೂಲಸೌಕರ್ಯ ಸ್ಥಗಿತಗೊಂಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 5 ವರ್ಷಕ್ಕೆ ಚುನಾವಣೆ ಚುನಾಯಿತ ಪ್ರತಿನಿಧಿಗಳು ಇಲ್ಲದ ‌ಕಾರಣ ಗ್ರಾಮ‌ಸ್ವರಾಜ ವ್ಯವಸ್ಥೆಯ ವಿರೋಧ ಕ್ರಮವಾಗಿದೆ ಎಂದರು.

ಹೇಮನಾಳ ಗ್ರಾಮ ಪಂಚಾಯಿತಿಗೆ ಮದರಕಲ್ ಗ್ರಾಮ ಸೇರ್ಪಡೆ ಮಾಡುವ ಕುರಿತು ಹೈಕೋರ್ಟ್ ನಲ್ಲಿ‌ ದಾವೆ ಇರುವ ಕಾರಣ ತಡೆಯಾಜ್ಞೆ ಇದ್ದು, ಶೀಘ್ರವೇ ತೆರವುಗೊಳಿಸಿ ಎರಡು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಗ್ರಾಮಸ್ಥರಾದ ದೇವೆಂದ್ರಪ್ಪ ಗೌಡ ಶಾವಂತಗೇರಾ, ರಾಜ ಶೇಖರ ಪಾಟೀಲ, ಪರ್ವತ ರೆಡ್ಡಿ ಗೌಡ, ತಮ್ಮಣ್ಣ ಬೊಮ್ಮನಾಳ, ವಿಜಯ ಭಂಡಾರಿ ಶಾವಂತಗೇರಾ, ಸೂಗಪ್ಪ ಗೌಡ ಹೊನ್ನಟಗಿ, ಬಸವರಾಜ, ಮಾಂತಪ್ಪ ಸಾಹುಕಾರ ಹೇಮನಾಳ, ಅಮರೇಗೌಡ ಹೊನ್ನಟಗಿ, ಸತ್ಯ ನಾರಾಯಣ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.