ADVERTISEMENT

ಐತಿಹಾಸಿಕ ಸ್ಥಳ ಅತಿಕ್ರಮಣ ತಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 12:03 IST
Last Updated 14 ಫೆಬ್ರುವರಿ 2020, 12:03 IST

ರಾಯಚೂರು:ನಗರದ ವಾರ್ಡ್‌ ಸಂಖ್ಯೆ 11 ರ ವ್ಯಾಪ್ತಿಯ ಬೇರೂನ್‌ ಕಿಲ್ಲಾ ಬಡಾವಣೆಯಲ್ಲಿ ಕೋಟೆ ಪಕ್ಕದ ಐತಿಹಾಸಿಕ ಕಂದಕ ರಾಜಕಾಲುವೆಯನ್ನು ಮಹಾವೀರ ಸರ್ಕಲ್‌ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ವ್ಯವಸ್ಥಿತವಾಗಿ ಅತಿಕ್ರಮಿಸಲಾಗುತ್ತಿದ್ದು, ಕೂಡಲೇ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಕ್ರಾಂತಿಯೋಗಿ ಬಸವೇಶ್ವರ ಸೇವಾ ಸಂಘವು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದೆ.

ಹಾಳುಬಿದ್ದಿರುವ ಜಾಗದಲ್ಲಿ ಮಹಿಳೆಯರು ಬಹಿರ್ದೆಸೆ ಹೋಗುತ್ತಿದ್ದರು. ಇಂತಹ ಜಾಗವನ್ನು ಸಹ ಅತಿಕ್ರಮಿಸಲು ಮುಂದಾಗಿರುವುದು ಆತಂಕಕಾರಿ. ಕಾನೂನುಬಹಿರ ಕಟ್ಟಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶಕುಮಾರ್‌ ಕೋರಿದ್ದಾರೆ.

ವರದಿಗೆ ಸೂಚನೆ: ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದ ಮನವಿಯನ್ನು ಅದೇ ದಿನದಂದು ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಕಳುಹಿಸಲಾಗಿದೆ. ಕೋಶದ ಯೋಜನಾಧಿಕಾರಿ ಕೂಡಾ ಅದೇ ದಿನದಂದು ನಗರಸಭೆಗೆ ದೂರು ವಿವರ ಒಳಗೊಂಡ ಪತ್ರ ಕಳುಹಿಸಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ವರದಿ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.