ADVERTISEMENT

ವಡ್ಲೂರು: ಮೂವರಿಗೆ ಕೊರೊನಾ ಪಾಸಿಟಿವ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 11:55 IST
Last Updated 9 ಜೂನ್ 2020, 11:55 IST
ಶಕ್ತಿನಗರ ಬಳಿಯ ವಡ್ಲೂರು ಗ್ರಾಮದಲ್ಲಿ ಕೊವಿಡ್‌ ಸೋಂಕಿತರು ವಾಸಿಸುತ್ತಿರುವ ಪ್ರದೇಶವನ್ನು ಮಂಗಳವಾರ ಸೀಲ್‌ಡೌನ್ ಮಾಡಿರುವುದು
ಶಕ್ತಿನಗರ ಬಳಿಯ ವಡ್ಲೂರು ಗ್ರಾಮದಲ್ಲಿ ಕೊವಿಡ್‌ ಸೋಂಕಿತರು ವಾಸಿಸುತ್ತಿರುವ ಪ್ರದೇಶವನ್ನು ಮಂಗಳವಾರ ಸೀಲ್‌ಡೌನ್ ಮಾಡಿರುವುದು   

ಶಕ್ತಿನಗರ: ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಡ್ಲೂರು ಗ್ರಾಮದಲ್ಲಿ ಒಂದೇ ಕುಟುಂಬದ ಮೂರು ಜನರಿಗೆ ಕೋವಿಡ್ –19 ಪ್ರಕರಣಗಳು ದೃಢಪಟ್ಟಿವೆ.

ಇದೀಗ ಅವರು ವಾಸ ಮಾಡುತ್ತಿದ್ದ ಬಡಾವಣೆಯನ್ನು ಮಂಗಳವಾರ ಬೆಳಿಗ್ಗೆಯಿಂದಲೇ ಸೀಲ್‌ಡೌನ್ ಮಾಡಲಾಗಿದೆ.

ವಡ್ಲೂರು ಗ್ರಾಮದಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದ ಈ ಮೂವರು, ಯಾದಗಿರಿ ಕ್ವಾರಂಟೈನ್‌ನಲ್ಲಿ ಉಳಿದಿದ್ದರು. ಆದರೆ, ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಅನೇಕರನ್ನು ಮನೆಗೆ ಕಳುಹಿಸಲಾಗಿತ್ತು.

ADVERTISEMENT

ಈ ಸಂದರ್ಭದಲ್ಲಿ ವಡ್ಲೂರು ಗ್ರಾಮದ ಈ ಮೂವರು ತಮ್ಮ ತವರಿಗೆ ಮರಳಿದ್ದರು. ಗರ್ಭೀಣಿಯೊಬ್ಬರು ಮೇ 6 ರಂದು ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆಕೆಯ ಗಂಟಲು ದ್ರವ ಪರೀಕ್ಷಿಸಿದಾಗ ಪಾಸಿಟಿವ್ ಪತ್ತೆಯಾಗಿದ್ದು ಅವರನ್ನು ರಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

ಕೋವಿಡ್ ಸೋಂಕಿತ ರೋಗಿಗಳು ಗ್ರಾಮದಲ್ಲಿ ಬಹುತೇಕ ಕಡೆ ಸುತ್ತಾಡಿದ್ದಾರೆ. ಸೋಂಕಿತರು ವಾಸಿಸುತ್ತಿರುವ ವಾರ್ಡ್‌ನಲ್ಲಿ 22 ಕುಟುಂಬಗಳು ಇವೆ. ಅದರ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗಿದೆ. ಆ ಏರಿಯಾಕ್ಕೆ ಬೇಕಾದ ಅಗತ್ಯ ಆಹಾರ ಪದಾರ್ಥಗಳು ಮತ್ತು ಕುಡಿಯುವ ನೀರು ಒದಗಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತಮ್ಮ ಅವರು ಹೇಳಿದರು.

ತಹಶೀಲ್ದಾರ ಡಾ.ಹಂಪಣ್ಣ ಸಜ್ಜನ್ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.