ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಮುದಗಲ್ ಸಮೀಪದ ಕುಮಾರಖೇಡ ಗ್ರಾಮದ ಹೊರವಲಯದಲ್ಲಿ ಕಾಡುಹಂದಿಯೊಂದು ಕುರಿಗಾಯಿ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
ಹನುಮಂತ ಬಸಪ್ಪ (35) ಕುರಿ ಕಾಯಲು ಹೋದಾಗ ಕಾಡುಹಂದಿ ದಿಢೀರ್ ದಾಳಿ ಮಾಡಿ ಹೊಟ್ಟೆ ,ಕಾಲು ,ಎದೆ, ಬೆನ್ನಿನ ಭಾಗಕ್ಕೆ ತಿವಿದು ಗಾಯಗೊಳಿಸಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ 108 ಆರೋಗ್ಯ ರಕ್ಷಕವಚ ಸಿಬ್ಬಂದಿ ಬಸಲಿಂಗಪ್ಪ ನಿರಲ್ ಕೇರಿ, ಹಾಗೂ ಪೈಲೆಟ್ ಮಾಹಂತೇಶ್ ಸ್ಥಳಕ್ಕೆ ತೆರಳಿ ವ್ಯಕ್ತಿಯನ್ನು ಮುದಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.