ADVERTISEMENT

ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:02 IST
Last Updated 1 ಜೂನ್ 2025, 15:02 IST
ಶರಣಬಸವ
ಶರಣಬಸವ   

ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ಚಿನ್ನದ ಗಣಿಯಲ್ಲಿ ಭಾನುವಾರ ಕಲ್ಲು ಮಿಶ್ರಿತ ಸಡಿಲ ಮಣ್ಣು ಕುಸಿದು ಕಾರ್ಮಿಕ ಮೃತಪಟ್ಟಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಶರಣಬಸವ ವೀರಾಪುರ (39) ಮೃತರು. ನಿರುಪಾದಿ ಪಾಮನಕೆಲ್ಲೂರು (22) ಗಾಯಗೊಂಡಿದ್ದಾರೆ.

ಕಂಪನಿಯ ಮಲ್ಲಪ್ಪ ಶಾಫ್ಟ್‌ನ 2,800 ಆಳದ ವಿಭಾಗದಲ್ಲಿ ಕೆಲಸ ಮಾಡುವಾಗ ಏರ್‌ಬ್ಲಾಸ್ಟ್‌ನಿಂದಾಗಿ ಕಲ್ಲು ಮಿಶ್ರಿತ ಸಡಿಲ ಮಣ್ಣು ಕುಸಿದು ಶರಣಬಸವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಿರುಪಾದಿ ಅವರಿಗೆ ತೀವ್ರ ಗಾಯಗಳಾಗಿವೆ. ಅವರಿಗೆ ಗಣಿ ಕಂಪನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ಕಳುಹಿಸಲಾಗಿದೆ.

ADVERTISEMENT

ದೊಡ್ಡ ಗಾತ್ರದ ಕಲ್ಲು ಮಿಶ್ರಿತ ಮಣ್ಣು ಬಿದ್ದ ಕಾರಣ ಕಾರ್ಮಿಕನ ಮೃತದೇಹ ಹೊರತೆಗೆಯಲು ಕಂಪನಿಯ ರಕ್ಷಣಾ ತಂಡದವರು ಹರಸಾಹಸಪಟ್ಟರು.

ಸ್ಧಳಕ್ಕೆ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.