ADVERTISEMENT

ಯುವ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 15:32 IST
Last Updated 19 ಆಗಸ್ಟ್ 2022, 15:32 IST
ರಾಯಚೂರಿನ ಡಾ. ಬಿ,ಆರ್ ಅಂಬೇಡ್ಕರ್  ಶುಕ್ರವಾರ ಯುವ ಕಾಂಗ್ರೆಸ್ ಮುಖಂಡರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಯಚೂರಿನ ಡಾ. ಬಿ,ಆರ್ ಅಂಬೇಡ್ಕರ್  ಶುಕ್ರವಾರ ಯುವ ಕಾಂಗ್ರೆಸ್ ಮುಖಂಡರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.   

ರಾಯಚೂರು: ವಿರೋಧ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರ‌ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಜಿಲ್ಲಾ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ನಗರದ ಡಾ.ಬಿ.ಅರ್ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ಯುವಕರು ಬಿಜೆಪಿ ಮುಖಂಡರ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯೂತ್ ಕಾಂಗ್ರೆಸ್ ‌ಅಧ್ಯಕ್ಷ ಅರುಣ್ ದೋತರಬಂಡಿ ಮಾತನಾಡಿ, ರಾಜ್ಯ ಸರ್ಕಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ರಕ್ಷಣೆ ಕೊಡದೇ ಬಿಜೆಪಿಯ ಗುಂಡಾಗಳನ್ನು ಬಿಟ್ಟು ಗುಂಡಾ ವರ್ತನೆ ತೋರಿದ್ದಾರೆ. ಯುವಕರನ್ನು ಪ್ರಚೋದಿಸಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಬಿಜೆಪಿಯ ನಾಯಕರು, ಶಾಸಕರು ತಮ್ಮ ಮಕ್ಕಳಿಗೆ ಬೀದಿಗಿಳಿಸಿ ಹೋರಾಟ ಮಾಡಲಿ. ಬಡ, ಮಧ್ಯಮ ವರ್ಗದ ಯುವಕರನ್ನು ದಿಕ್ಕು ತಪ್ಪಿಸಬಾರದು ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ವಿಪಕ್ಷ ನಾಯಕರಿಗೆ ಭದ್ರತೆ ನೀಡದೇ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದು ಹೇಗೆ. ಇದು ಸರ್ಕಾರದ ಕರಾಳ ಮುಖಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರ ಅಭದ್ರತೆಯಲ್ಲಿ ಆಡಳಿತ ನಡೆಸುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ಅಕ್ಮಲ್, ಫರೀದ್ ಮೌಲಾನಾ, ವಸಂತ, ಜಾವೀದ್, ಬಾಬು, ರಾಜೇಂದ್ರ, ಸೋನು, ಮೋಯಿನ್, ಶೇಖ್ ಬಾಬಾ, ಶಂಕರ, ರಜಿಯಾ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.