
ಪ್ರಜಾವಾಣಿ ವಾರ್ತೆಚನ್ನಪಟ್ಟಣ: ರಾಜಕೀಯದ ಕರಿನೆರಳು ಶಿಕ್ಷಣ ಕ್ಷೇತ್ರದಲ್ಲೂ ಮೇಲೆ ಬೀಳುತ್ತಿರುವುದು ವಿಷಾದನೀಯ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಿವರಾಮೇಗೌಡ ಹೇಳಿದರು.
ಕಾಲೇಜಿನಲ್ಲಿ ಶನಿವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಸಿದ್ದಪ್ಪಗೌಡ, ಪ್ರಭಾರ ಪ್ರಾಂಶುಪಾಲ ಭೂಹಳ್ಳಿ ಪುಟ್ಟಸ್ವಾಮಿ ಶಿವರಾಮೇಗೌಡ ಅವರ ಸೇವೆಯನ್ನು ಸ್ಮರಿಸಿದರು.  ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಇ.ತಿ.ಶ್ರಿನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ಕೋಶಾಧ್ಯಕ್ಷೆ  ಕೆ.ಟಿ.ಲಕ್ಷ್ಮಮ್ಮ, ತಾಲ್ಲೂಕು ಅಧ್ಯಕ್ಷ ಬೇವೂರು ಯೋಗೇಶ್, ಉಪನ್ಯಾಸಕ ಶಿವಲಿಂಗಯ್ಯ, ಶಿಕ್ಷಕ ಚನ್ನಪ್ಪ, ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.