ಚನ್ನಪಟ್ಟಣ: ತಾಲ್ಲೂಕಿನ ಕೋಟಮಾರನಹಳ್ಳಿಯ ಬಾಲಕ ಕೆ.ಎ. ಗೌತಮ್ ಒಂದು ಕೆ.ಜಿ ಸಾಸಿವೆ ಕಾಳು ಎಣಿಸುವ ಮೂಲಕ ದಾಖಲೆ ಮಾಡಿ ‘ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದ್ದಾನೆ.
ಈತ ಒಂದು ಕೆ.ಜಿ ಸಾಸಿವೆಯಲ್ಲಿ 2,31,360 ಕಾಳುಗಳಿವೆ ಎಂಬುದನ್ನು ಎಣಿಸಿ ಹೇಳಿದ್ದಾನೆ. ಒಂದು ಕೆ.ಜಿ ಸಾಸಿವೆ ಕಾಳು ಎಣಿಸಲು ಈತ ಸತತ 76 ಗಂಟೆ ಸಮಯ ತೆಗೆದುಕೊಂಡಿದ್ದಾನೆ. ಈತನ ಸಾಧನೆಯು 2020-21ನೇ ಸಾಲಿನ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.