
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರದ ಅಂಜನಾನಗರದಲ್ಲಿರುವ ಸ್ಪೂರ್ತಿಧಾಮ ನಿರ್ವಹಿಸುವ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ ಆಯೋಜಿಸಲಿರುವ ಅಂಬೇಡ್ಕರ್ ಹಬ್ಬ 2026ರಲ್ಲಿ ಪ್ರದಾನ ಮಾಡುವ ಎರಡು ಪ್ರಶಸ್ತಿಗಳಿಗೆ ಪ್ರಸ್ತಾವ ಆಹ್ವಾನಿಸಲಾಗಿದೆ.
ತಳಸ್ತರದವರ ಅಭಿವೃದ್ದಿ ಮತ್ತು ಏಳಿಗೆಗಾಗಿ ದುಡಿದವರಿಗೆ ಒಂದು ಬೋಧಿವೃಕ್ಷ ಹಾಗೂ ಐದು ಬೋಧಿವರ್ಧನ ಪ್ರಶಸ್ತಿ ನೀಡಲಾಗುತ್ತದೆ. ಬೋಧಿವೃಕ್ಷ ಪ್ರಶಸ್ತಿಯೊಂದಿಗೆ ₹1 ಲಕ್ಷ ಹಾಗೂ ಬೋಧಿವರ್ಧನ ಪ್ರಶಸ್ತಿಯೊಂದಿಗೆ ತಲಾ ₹25 ಸಾವಿರ ನಗದು ಬಹುಮಾನವನ್ನೂ ನೀಡಲಾಗುತ್ತದೆ.
ಇಂಥವರ ಬಗ್ಗೆ ಮಾಹಿತಿ ಇದ್ದವರು, ಇಲ್ಲವೇ ಸಾಧನೆ ಮಾಡಿದವರು ವಿವರವನ್ನು ಮಾ.20ರೊಳಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ 9108830438
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.