ಆನೇಕಲ್: ತಾಲ್ಲೂಕಿನ ಇಗ್ಗಲೂರು ಗ್ರಾಮದ ನಾದಸ್ವರ ಡೋಲು ವಾದಕ 22 ವರ್ಷದ ಆರ್.ತೇಜ ಅವರು ನವದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡೋಲು ವಾದನದ ಪ್ರದರ್ಶನ ನೀಡಲಿದ್ದಾರೆ.
ಮೃದಂಗ, ವಯೋಲಿನ್, ವೀಣೆ ಸೇರಿದಂತೆ ಕರ್ನಾಟಿಕ್ ಸಂಗೀತದ ಐದು ವಾದ್ಯಗಳಿಗೆ ಕಾರ್ಯಕ್ರಮದಲ್ಲಿ ಅವಕಾಶ ಕೊಡಲಾಗಿದೆ. ಈ ಪೈಕಿ ಆರ್.ತೇಜ ಅವರ ನಾದಸ್ವರ ಡೋಲು ಸಹ ಆಯ್ಕೆಯಾಗಿದೆ.
ರಘುಪತಿರಾಘವ ರಾಜಾರಾಮ್, ವಂದೇ ಮಾತರಂ, ಜಗದೋದ್ದಾರನ ಎಂಬ ಮೂರು ಗೀತೆಗಳಿಗೆ ಡೋಲು ಮೂಲಕ ವಾದನ ನಡೆಸಿಕೊಡಲಿದ್ದಾರೆ.
ಚಂದಾಪುರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ 3ನೇ ತರಗತಿಯಲ್ಲಿಯೇ ಡೋಲು ಪ್ರದರ್ಶನ ನೀಡಿದ್ದ ತೇಜ ಅವರು 6ನೇ ವರ್ಷದಿಂದಲೇ ಡೋಲು ವಾದಕರಾಗಿದ್ದಾರೆ. ಭಕ್ತಿಗೀತೆ, ಭಾವಗೀತೆ ಮತ್ತು ವಿವಿಧ ರಾಗಗಳನ್ನು ಡೋಲಿನ ಮೂಲಕ ನುಡಿಸುವಲ್ಲಿ ಖ್ಯಾತಿಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.