ADVERTISEMENT

ರಾಮನಗರ: ಝೀಕಾ ವೈರಸ್‌ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 5:25 IST
Last Updated 21 ನವೆಂಬರ್ 2023, 5:25 IST
ರಾಮನಗರದ ಜಾಲಮಂಗಲ ರಸ್ತೆಯ ಬಿಳಗುಂಬ ಸರ್ಕಲ್ ಬಳಿ ರೋಟರಿ ಸಂಸ್ದೆಯಿಂದ ಜಿಕಾ ವೈರಸ್ ಕುರಿತು ಸೋಮವಾರ ನಡೆದ ಜಾಗೃತಿ ಜಾಥಾದಲ್ಲಿ ಪಟೇಲ್ ಆಂಗ್ಲ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ಸಿ. ರಾಜು ಅವರು ಸಾರ್ವಜನಿಕರಿಗೆ ಕರಪತ್ರ ವಿತರಿಸಿದರು. ರೋಟರಿ ಅಧ್ಯಕ್ಷ ಕಾಂತರಾಜು ಇದ್ದಾರೆ
ರಾಮನಗರದ ಜಾಲಮಂಗಲ ರಸ್ತೆಯ ಬಿಳಗುಂಬ ಸರ್ಕಲ್ ಬಳಿ ರೋಟರಿ ಸಂಸ್ದೆಯಿಂದ ಜಿಕಾ ವೈರಸ್ ಕುರಿತು ಸೋಮವಾರ ನಡೆದ ಜಾಗೃತಿ ಜಾಥಾದಲ್ಲಿ ಪಟೇಲ್ ಆಂಗ್ಲ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ಸಿ. ರಾಜು ಅವರು ಸಾರ್ವಜನಿಕರಿಗೆ ಕರಪತ್ರ ವಿತರಿಸಿದರು. ರೋಟರಿ ಅಧ್ಯಕ್ಷ ಕಾಂತರಾಜು ಇದ್ದಾರೆ   

ರಾಮನಗರ: ನಗರದ ಜಾಲಮಂಗಲ ರಸ್ತೆಯ ಬಿಳಗುಂಬ ಸರ್ಕಲ್ ಬಳಿ ರೋಟರಿ ರಾಮನಗರ ವತಿಯಿಂದ ಝೀಕಾ ವೈರಸ್ ಕುರಿತು ಸೋಮವಾರ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

ನಡೆಯಿತು. ರಸ್ತೆಯಲ್ಲಿ ಜಾಥಾ ಸಾಗಿದ ವಿದ್ಯಾರ್ಥಿಗಳು ಮತ್ತು ರೋಟರಿ ಪದಾಧಿಕಾರಿಗಳು ಸಾರ್ವಜನಿಕರಿಗೆ ಝೀಕಾ ಕುರಿತು ಕರಪತ್ರ ವಿತರಿಸಿದರು.

ಜಾಥಾಗೆ ಚಾಲನೆ ನೀಡಿದ ಪಟೇಲ್ ಅಂಗ್ಲ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ಸಿ. ರಾಜು, ‘ಡೆಂಗಿ, ಚಿಕನ್ ಗುನ್ಯಾ ಹರಡುವ ಈಡಿಸ್ ಜಾತಿಯ ಸೊಳ್ಳೆಗಳು ಝೀಕಾ ವೈರಸ್ ಸೋಂಕು ಹರಡುತ್ತಿವೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಕಚ್ಚುತ್ತವೆ. ಇವುಗಳ ಬಗ್ಗೆ ಎಚ್ಚರಿಕೆ ಅಗತ್ಯ’ ಎಂದರು.

ADVERTISEMENT

‘ನಿಂತ ನೀರು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಗಿವೆ. ಜ್ವರ, ತಲೆನೋವು ,ಕಣ್ಣು ಕೆಂಪಾಗುವಿಕೆ, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಝೀಕಾ ಸೋಂಕಿನ ಲಕ್ಷಣಗಳಾಗಿವೆ. ರೋಗಲಕ್ಷಣಗಳ ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು ಕನಿಷ್ಠ 2ರಿಂದ 7 ದಿನಗಳವರೆಗೆ ಇರುತ್ತದೆ. ಸೋಂಕು ನಿಯಂತ್ರಿಸಬೇಕಾದರೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು’ ಎಂದು ಹೇಳಿದರು.

ರೋಟರಿ ಅಧ್ಯಕ್ಷ ಕಾಂತರಾಜು ಮಾತನಾಡಿ, ‘ರೋಟರಿ ಸಂಸ್ಥೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಅದರ ಭಾಗವಾಗಿ ಇಂದು ಝೀಕಾ ಸೋಂಕಿನ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ವಿವಿಧ ವಾರ್ಡ್‌ಗಳ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಿ ಜನರಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗಿದೆ’ ಎಂದರು.

ಪಟೇಲ್ ಆಂಗ್ಲ ಶಾಲೆ ಮತ್ತು ನೇತಾಜಿ ಪಾಪ್ಯುಲರ್ ಶಾಲೆಯ ಮಕ್ಕಳು ಹಾಗೂ ರೋಟರಿ ಸದಸ್ಯರು ಜಾಥಾದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.