ADVERTISEMENT

ಕಳಪೆ ಬಿತ್ತನೆ ಬೀಜ ವಿತರಣೆ: ರೈತರ ಆರೋಪ

​ಪ್ರಜಾವಾಣಿ ವಾರ್ತೆ
Published 31 ಮೇ 2019, 14:34 IST
Last Updated 31 ಮೇ 2019, 14:34 IST

ಮಾಗಡಿ: ಕೃಷಿ ಇಲಾಖೆಯಿಂದ ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿ ರೈತರನ್ನು ವಂಚಿಸಲಾಗುತ್ತಿದೆ ಎಂದು ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕ ವಾಜರಹಳ್ಳಿ ಗೋವಿಂದಯ್ಯ ಆರೋಪಿಸಿದರು.

ಮೂರು ದಿನಗಳ ಹಿಂದೆ ರಂಗಯ್ಯನಪಾಳ್ಯದ ರೈತ ಗಿರಿಯಪ್ಪ ₹2160 ನೀಡಿ 25ಕೆ.ಜಿ.ತೂಕದ ಶೇಂಗಾ ಖರೀದಿಸಿದ್ದಾರೆ. ಶೇಂಗಾ ಸುಲಿದಾಗ ಜೊಳ್ಳು ಎಂದು ಗೊತ್ತಾಗಿದೆ. ಅಧಿಕಾರಿಗಳು ರೈತರಿಗೆ ಸ್ಪಂದಿಸುತ್ತಿಲ್ಲ. ಖಾಸಗಿ ಬೀಜ ಉತ್ಪಾದಕರೊಂದಿಗೆ ಅಧಿಕಾರಿಗಳು ಕಮಿಷನ್‌ ದಂಧೆಗೆ ಮುಂದಾಗಿದ್ದಾರೆ. ರಾಗಿ, ತೊಗರಿ, ಹೆಸರು, ಉದ್ದು, ಅವರೆಕಾಳಿನ ಬಿತ್ತನೆ ಬೀಜಗಳನ್ನು ಖಾಸಗಿ ಅವರಿಂದ ಖರೀದಿಸಿ, ಸೀಡ್ಸ್‌ ಕಾರ್ಪೊರೇಷನ್‌ ಲೇಬಲ್‌ ಅಂಟಿಸಿ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಳಪೆ ಎನ್ನಲಾದ ಬೀಜವನ್ನು ಲ್ಯಾಬ್‌ಗೆ ಕಳಿಸಿ ಪರೀಕ್ಷಿಸಲಾಗುವುದು ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT