ADVERTISEMENT

ಚನ್ನಪಟ್ಟಣ: ಬಾರದ ಜೆಡಿಎಸ್ ನಾಯಕರು- ಶುರುವಾಗದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 5:33 IST
Last Updated 5 ಆಗಸ್ಟ್ 2024, 5:33 IST
<div class="paragraphs"><p>ಚನ್ನಪಟ್ಟಣ: ಬಾರದ ಜೆಡಿಎಸ್ ನಾಯಕರು- ಶುರುವಾಗದ ಪಾದಯಾತ್ರೆ</p></div>

ಚನ್ನಪಟ್ಟಣ: ಬಾರದ ಜೆಡಿಎಸ್ ನಾಯಕರು- ಶುರುವಾಗದ ಪಾದಯಾತ್ರೆ

   

ಚನ್ನಪಟ್ಟಣ (ರಾಮನಗರ): ಮುಡಾ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ನಾಯಕರು ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯು ಸೋಮವಾರ ಮೂರನೇ ದಿನಕ್ಕೆ‌ ಕಾಲಿಟ್ಟಿದೆ. ಆದರೆ, ನಿಗದಿತ ಸಮಯಕ್ಕೆ ಬಾರದ ಜೆಡಿಎಸ್ ನಾಯಕರಿಂದಾಗಿ, ಪಾದಯಾತ್ರೆ ಇನ್ನೂ ಶುರುವಾಗಿಲ್ಲ.

ಇಲ್ಲಿನ ಕೆಂಗಲ್ ನಲ್ಲಿರುವ ಆಂಜನೇಯ ದೇವಸ್ಥಾನದ ವೃತ್ತದಿಂದ ಬೆಳಿಗ್ಗೆ 9.30ಕ್ಕೆ ಪಾದಯಾತ್ರೆ ಶುರುವಾಗಬೇಕಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಬೆಳಿಗ್ಗೆಯೇ ಕೆಂಗಲ್ ಗೆ ಬಂದರು.

ADVERTISEMENT

ವಿವಿಧ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸಹ ಬಂದಿದ್ದಾರೆ. ಆದರೆ, ಜೆಡಿಎಸ್ ನ ಯಾವ ನಾಯಕರು ಸಹ ಸುಳಿದಿಲ್ಲ.

ಆಂಜನೇಯ ಸ್ವಾಮಿ ದರ್ಶನ ಪಡೆದ ಬಿಜೆಪಿ ನಾಯಕರು, ಪಾದಯಾತ್ರೆ ಆರಂಭಿಸುವುದಕ್ಕರ ಜೆಡಿಎಸ್ ನಾಯಕರಾದ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಕಾದು ಹೈರಾಣಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.