ADVERTISEMENT

ರಾಮನಗರ: ಮುಷ್ಕರದ ನಡುವೆ ಬಸ್‌ ಸಂಚಾರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 3:49 IST
Last Updated 18 ಏಪ್ರಿಲ್ 2021, 3:49 IST
ರಾಮನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಶನಿವಾರ ಕಂಡುಬಂದ ಬಸ್‌ಗಳು
ರಾಮನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಶನಿವಾರ ಕಂಡುಬಂದ ಬಸ್‌ಗಳು   

ರಾಮನಗರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರವು 11ನೇ ದಿನವಾದ ಶನಿವಾರವೂ ಮುಂದುವರಿಯಿತು. ಈ ನಡುವೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವೂ ಹೆಚ್ಚಾಗುತ್ತಿದೆ.

ರಾಮನಗರ–ಕನಕಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ಗೆ ಹಳ್ಳಿಮಾರನಹಳ್ಳಿ ಬಳಿ ದುಷ್ಕರ್ಮಿಗಳು ಕಲ್ಲು ತೂರಿದ್ದು, ಗಾಜು ಪುಡಿ ಪುಡಿಯಾಯಿತು. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಮುಷ್ಕರದ ನಡುವೆಯೂ ಬಸ್‌ಗಳ ಸಂಚಾರಕ್ಕೆ ಅಧಿಕಾರಿಗಳು ಪರ್ಯಾಯ ಕ್ರಮ ಕೈಗೊಳ್ಳುತ್ತಿದ್ದಾರೆ.

ಜೊತೆಗೆ ಖಾಸಗಿ ಬಸ್‌ಗಳ ಓಡಾಟವೂ ಹೆಚ್ಚಿದ್ದು, ಜನರ ಬವಣೆ ಕೊಂಚ ತಪ್ಪಿದೆ. ರಾಮನಗರ ವಿಭಾಗದಲ್ಲಿ ಶನಿವಾರ ಒಟ್ಟು 120 ಬಸ್‌ಗಳು ಸಂಚರಿಸಿದವು.

ADVERTISEMENT

ಈ ಪೈಕಿ ಕನಕಪುರ ಡಿಪೊ ಒಂದರಲ್ಲಿಯೇ 40 ಬಸ್‌ಗಳು ಸಂಚಾರ ಕೈಗೊಂಡವು. ಆನೇಕಲ್ ಡಿಪೊದಿಂದ 22, ಚನ್ನಪಟ್ಟಣದಿಂದ 15, ಹಾರೋಹಳ್ಳಿಯಿಂದ 14, ರಾಮನಗರದಿಂದ 16, ಮಾಗಡಿಯಿಂದ 13 ಬಸ್‌ಗಳು ಸಂಚರಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.